ಇಸ್ಲಾಮಾಬಾದ್:(ಜ29): ಮೊಟ್ಟ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯೊಬ್ಬರು ನ್ಯಾಯಾಧೀಶರಾಗಿದ್ದಾರೆ. ಪಾಕ್ ಮಾಧ್ಯಮಗಳ ವರದಿ ಪ್ರಕಾರ ಸುಮನ್ ಕುಮಾರಿ ಎಂಬುವವರು ಮೊದಲ ಹಿಂದೂ ನ್ಯಾಯಧೀಶರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಮಗಳು ಈ ಹುದ್ದೆಯನ್ನು ಅಲಂಕರಿಸಿದಕ್ಕೆ ತಂದೆ ಪವನ್ ಕುಮಾರ್ ಸಂತೋಷವನ್ನು ಹೊರಹಾಕುವುದರ ಜೊತೆಗೆ ಅವರ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂದಿದ್ದಾರೆ.

ಸುಮನ್ ಕುಮಾರಿ ಎಲ್ ಎಲ್ ಬಿ ಪದವಿಯನ್ನು ಹೈದರಾಬಾದ್‍ನಲ್ಲಿ ಮುಗಿಸಿದ್ದಾರೆ. ಇವರು ಖಂಬರ್-ಶಹದಾದ್ಕೋಟ್ ಜಿಲ್ಲೆಯವರಾಗಿದ್ದು, ಅಲ್ಲಿಯೆ ಸಿವಿಲ್ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ಈಗ ಪಾಕಿಸ್ತಾನದ ಮೊದಲ ಹಿಂದೂ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದು ಭಾರತೀಯರಿಗೂ ಹೆಮ್ಮೆಯ ವಿಷಯ.