ಇಸ್ಲಾಮಾಬಾದ್:(ಫೆ28): ಭಾರತೀಯ ಪೈಲೆಟ್ ಅಭಿನಂದನ್ ವರ್ಧಮಾನ್ ಅವರು ಪಾಕ್ ಸೆರೆಯಲ್ಲಿದ್ದು, ಅವರನ್ನು ಬಿಡುಗಡೆ ಮಾಡುವಂತೆ ಪಾಕ್ ಲೇಖಕಿ ಒತ್ತಾಯಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ನ ಒಪೆಡ್ ಪುಟದಲ್ಲಿ ಮಾಜಿ ಪ್ರಧಾನಿ ಜುಲಿಫ್ಕಾರ್ ಅಲಿ ಭುಟ್ಟೋ ಅವರ ಪುತ್ರಿ ಫಾತಿಮಾ ಭುಟ್ಟೋ ಅವರು ಬರೆದಿರುವ ಲೇಖನದಲ್ಲಿ ನಾನು ಮತ್ತು ಪಾಕಿಸ್ತಾನದ ಕೆಲವು ಯುವಕರು ಭಾರತದ ಪೈಲೆಟ್ ಅವರನ್ನು ಬಿಡುಗಡೆ ಮಾಡಬೇಕೆಂಬ ಅಭಿಪ್ರಾಯವನ್ನು ಹೊಂದಿದ್ದೇವೆ ಎನ್ನಲಾಗಿದೆ.

ಪಾಕಿಸ್ತಾನದ ಸೈನಿಕರು ಸಾಯುವುದು ಬೇಡ, ಭಾರತೀಯ ಸೈನಿಕರು ಸಾಯುವುದು ಬೇಡ, ಅನಾಥರ ಉಪಖಂಡವಾಗುವುದು ಬೇಕಿಲ್ಲ, ಸಭ್ಯತೆಯಿಂದ ವರ್ತಿಸಿ ಯುದ್ಧವನ್ನು ಬಯಸದೆ ಶಾಂತಿಯನ್ನು ಬಯಸುವುದರ ಮೂಲಕ ಅಭಿಪ್ರಾಯವನ್ನು ಅಭಿವ್ಯಕ್ತಿಸೋಣ.

ರಾಜಕರಣಿಗಳಾಗಲಿ ಇನ್ನು ಇತರರಾಗಲಿ ಯುದ್ಧ ಭೂಮಿಯಲ್ಲಿ ಹೋರಾಡುವವರಲ್ಲ ಸೈನಿಕರು ಮಾತ್ರ ಹೋರಾಡುವುದು. ಇಲ್ಲಿ ಎರಡು ದೇಶದ ಸೈನಿಕರ ಪ್ರಾಣ ಹೋಗುತ್ತದೆ. ಈ ರೀತಿ ಆಗುವುದು ಬೇಡ ಇದರಿಂದ ಸಭ್ಯತೆಯಿಂದ ಮಾತನಾಡಿ. ನಾವು ಭಾರತದ ಪೈಲೆಟ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದರ ಮೂಲಕ ನೈತಿಕತೆ, ಮಾನವೀಯತೆ ಮೆರೆದು ಘನತೆ ಉಳಿಸಿಕೊಳ್ಳಿ ಎಂದು ಲೇಖಕಿ ಫಾತಿಮಾ ಭುಟ್ಟೋ ಬರೆದಿದ್ದಾರೆ.

ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಭಾರತ ಹಿಮ್ಮೆಟ್ಟಿಸಲು ಮುಂದಾದ ವೇಳೆ ಭಾರತದ ಪೈಲೆಟ್ ಅಭಿನಂದನ್ ಅವರನ್ನು ಪಾಕ್ ಸೈನ್ಯ ಸೆರೆ ಹಿಡಿದಿದೆ. ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸುವಂತೆ ಭಾರತ ಆಗ್ರಹಿಸಿದೆ.