ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಚಿತ್ರ ಟ್ರೈಲರ್‍ನಲ್ಲಿಯೇ ಧೂಳೆಬ್ಬಿಸಿ ಬಿಟ್ಟಿದೆ. ಸ್ಯಾಂಡಲ್‍ವುಡ್‍ನಲ್ಲಿ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿ ಕ್ಷೇತ್ರದಲ್ಲಿಯೂ ಬಾರೀ ಮೆಚ್ಚುಗೆ ಪಡೆದಿದೆ.

ಕೆಜಿಎಫ್ ನಂತೆಯೇ ಮತ್ತೊಂದು ದಾಖಲೆ ಬರೆಯಲು ಹೊರಟಿದೆ ಪೈಲ್ವಾನ್
ಹೌದು ಕೆಜಿಎಫ್ ನಂತೆಯೇ ಮತ್ತೊಂದು ದಾಖಲೆ ಬರೆಯಲು ಹೊರಟಿದೆ. ಸ್ಯಾಂಡಲ್‍ವುಡ್ ಸಿನಿಮಾವೊಂದು. ಕೆಜಿಎಫ್ ಐದು ಬಾಷೆಯಗಳಲ್ಲಿ ರಿಲೀಸ್ ಆದರೆ ಪೈಲ್ವಾನ್ ಎಂಟು ಭಾಷೆಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಭೋಜಪುರಿ, ಬಂಗಾಳಿ ಮತ್ತು ಪಂಜಾಬಿ ಭಾಷೆಗಳಲ್ಲಿ ರಿಲೀಸ್ ಮಾಡಲು ಹೊರಟಿದ್ದಾರೆ.

ಪೈಲ್ವಾನಲ್ಲಿ ಕಿಚ್ಚನ ಕಿಚ್ಚು ಏನೆಂಬುದನ್ನು ತೋರಿಸಲು ಹೊರಟಿದ್ದಾರೆ ಕಿಚ್ಚ

ಟ್ತೈಲರ್‍ನಲ್ಲಿಯೇ ಖಡಕ್‍ಕಾಗಿ ಕಾಣಿಸಿಕೊಂಡ ಸುದೀಪ್, ಪೈಲ್ವಾನ್‍ಗಾಗಿ ಜಿಮ್‍ನಲ್ಲಿ ಬೆವರಿಳಿಸಿ 16 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಪೈಲ್ವಾನ್ ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನ ಕಿಚ್ಚ 89 ಕೆಜಿ ಇದ್ದು, ಪೈಲ್ವಾನ್ ಚಿತ್ರಕ್ಕಾಗಿ ವರ್ಕೌಟ್ ಮಾಡಿದ ನಂತರ 73 ಕೆ.ಜಿ ತೂಕ ಇದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ದೂರಿ ಸೆಟ್

ಪೈಲ್ವಾನ್ ಕಲರ್‍ಪುಲ್ ಸೆಟ್ ನಿರ್ಮಾಣವಾಗಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ದೂರಿ ಸೆಟ್ ನಿರ್ಮಾಣವಾಗಿದ್ದು, ಶೂಟಿಂಗ್ ನಡೆಯುತ್ತಿದೆ.

ಟಿವಿ ಹಕ್ಕುಗಳಿಗಾಗಿ ಬಂತು 30 ಕೋಟಿ ಆಫರ್

ಚಿತ್ರದ ನಿರ್ದೇಶಕ ಕೃಷ್ಣ ಮಾಧ್ಯಮೊಂದಕ್ಕೆ ನೀಡಿದ ಸಂದರ್ಶನದ ವೇಳೆ ಸ್ಯಾಟಲೈಟ್ ಹಕ್ಕುಗಳಿಗೆ ಸಂಬಂಧಿಸಿದಂತೆ ಆಫರ್‍ಗಳು ಬಂದಿದ್ದು, ಆಲ್ ಇಂಡಿಯಾ ಟಿವಿ ಹಕ್ಕುಗಳಿಗಾಗಿ 30 ಕೋಟಿ ಆಫರ್ ಬಂದಿದೆ. ಇದುವರೆಗೂ ಕನ್ನಡದ ಯಾವ ಚಿತ್ರಕ್ಕೂ ಇಷ್ಟು ಮೊತ್ತದ ಆಫರ್ ಬಂದಿಲ್ಲ ಎನ್ನಲಾಗಿದೆ.

ಸಿನಿಲೋಕದ ಕಣ್ಣು ಚಂದನವನದತ್ತ

ಅಬ್ಬಾಬ್ಬ ಈ ಬಾರಿ ಚಂದನವನದತ್ತ ಇಡೀ ಸಿನಿ ಲೋಕವೇ ತಿರುಗಿ ನೋಡುವಂತಹ ಸುಂಟರ ಗಾಳಿ ಎದ್ದಿದೆ. ಸ್ಯಾಂಡಲ್‍ವುಡ್ ಸಿನಿಮಾಗಳು ದಾಖಲೆ ಬರೆಯಲು ಹೊರಟಿವೆ. ಈಗಾಗಲೇ ಕೆಜಿಎಫ್ ದಾಖಲೆ ಬರೆದಿದ್ದು, ಈಗ ಪೈಲ್ವಾನ್ ದಾಖಲೆ ಬರೆಯಲು ರೆಡಿ ಆಗ್ತಾಯಿದೆ.