ಢಾಕಾ(ಜ:02): ಚುನಾವಣೆಯ ಗೆಲುವಿನ ನಂತರ ಮಾತನಾಡಿದ ದೇಶದ ನಿಯೋಜಿತ ಪ್ರಧಾನಿ ಶೇಖ್ ಹಸೀನಾ ‘ನಾನು ಎಲ್ಲರ ಪ್ರಧಾನಿ’ ನಮ್ಮ ಸರ್ಕಾರದ ಮೊದಲ ಆದ್ಯತೆ ಆರ್ಥಿಕ ಸುಧಾರಣೆ ಎಂದಿದ್ದಾರೆ.

ಜೊತೆಗೆ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬುದು ಸುಳ್ಳು ಆರೋಪ ಒಂದು ವೇಳೆ ಅಕ್ರಮ ನಡೆದಿದ್ದರೆ ಚುನಾವಣಾ ಆಯೋಗ ಮತದಾನ ರದ್ದುಪಡಿಸುತ್ತಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ನಂತರ ಆಡಳಿತದ ಬಗ್ಗೆ ಮಾತನಾಡಿದ ಹಸೀನಾ ನಮ್ಮ ಪಕ್ಷ ಯಾವುದೇ ಕಾರಣಕ್ಕೂ ಸೇಡಿನ ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ .