ಬೆಂಗಳೂರು:(ಜ31): ನಮ್ಮ ದೇಶಕ್ಕೆ ಹೊಸದೊಂದು ಕಾಯಿಲೆ ಬಂದಿದೆ. ಆ ಕಾಯಿಲೆಯಿಂದ ಸ್ನೇಹಿತರು, ಬಂಧು ಬಾಂಧವರು ಪಕ್ಕದಲ್ಲಿಯೇ ಇದ್ದರು ಗೋಚರಿಸುವುದಿಲ್ಲ.

ಈಗಿನ ಕಾಲದ ಜನತೆ ಮೊಬೈಲ್‍ನಲ್ಲಿ ಹೆಚ್ಚು ತಲ್ಲೀನರಾಗಿದ್ದು, ಒಂದು ದಿನ ಮೊಬೈಲ್ ಬಿಟ್ಟು ಬದುಕಲಾಗದ ಸ್ಥಿತಿ ಬಂದೊದಗಿದೆ. ಇದಕ್ಕೀಗ ನವರಸ ನಾಯಕ ಜಗ್ಗೇಶ್ ಈ ಮೊಬೈಲ್ ರೋಗದಿಂದ ಪಾರು ಮಾಡಪ್ಪ ಎಂದಿದ್ದಾರೆ.

ನಟ ಜಗ್ಗೇಶ್ ಟ್ವಿಟರ್‍ನಲ್ಲಿ ಮೊಬೈಲ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದೇನೆಂದರೆ ” ನಮ್ಮ ದೇಶಕ್ಕೆ ಬಂದ ಹೊಸ ರೋಗ ಯಾವುದೆಂದರೆ ಅದು ಮೊಬೈಲ್ ರೋಗ, ಬಂಧು ಬಾಂಧವರು, ಸ್ನೇಹಿತರು ಪಕ್ಕದಲ್ಲಿಯೇ ಇದ್ದರು ಸತ್ತವರಂತೆ ಭಾವಿಸಿ ಮೊಬೈಲ್‍ನಲ್ಲಿ ತಲ್ಲೀನರಾಗಿರುವ ರೋಗ ಬಂದಿದೆ. ಇದಕ್ಕೆ ಮದ್ದು ಕಂಡುಹಿಡಿಯದಿದ್ದರೆ, ಮಾನವರು ಏಕಾಂಗಿ ಎಂಬ ರೋಗದಿಂದ ಸಾವನ್ನಪ್ಪುತ್ತಾರೆ. ಇದಕ್ಕೆ ದಯಮಾಡಿ ಬೇಗ ಔಷಧಿ ಕಂಡು ಹಿಡಿದು ಈ ರೋಗದಿಂದ ಜನರನ್ನು ಉಳಿಸಬೇಕು ದೇವರಿಗಿ ಪ್ರಾರ್ಥನೆ ಎಂದು ಟ್ವೀಟ್ ಮಾಡಿದ್ದಾರೆ.