91ನೇ ಅಕಾಡಮಿ ಪ್ರಶಸ್ತಿಗಳ ಸಾಕ್ಷ್ಯ ಚಿತ್ರಗಳ ವಿಭಾಗದಲ್ಲಿ ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್ ಎಂಬ ಚಿತ್ರ ಅತ್ಯುತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅತ್ಯುತ್ತಮ ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಒಟ್ಟು 10 ಚಿತ್ರಗಳು ಆಯ್ಕೆಯಾಗಿದ್ದವು,ಅವುಗಳಲ್ಲಿ ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್ ಸಿನಿಮಾಗೆ ಪ್ರಶಸ್ತಿ ಲಭಿಸಿದೆ.

ಈ ಸಿನಿಮಾ ಡಾಕ್ಯುಮೆಂಟರಿ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುವ ಯಂತ್ರಗಳನ್ನು ರೂಪಿಸಿದ ಮುರುಗನಂಥಮ್ ಅವರ ಕಥೆಯನ್ನು ಆಧರಿಸಿ ಚಿತ್ರೀಕರಿಸಲಾಗಿತ್ತು. ಅಮೇರಿಕನ್ ನಿರ್ದೇಶಕ ರಾಯಕಾ ಖೇತಾಭ್ಚಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.