ಮಂಗಳೂರು(ಜೂನ್.18) ಕರಾವಳಿ ಭಾಗದಲ್ಲಿನ ಅಕ್ರಮ ಗೋವು ಸಾಗಾಣಿಕೆಯನ್ನು ತಡೆಯಲು ಮುಸ್ಲಿಂ ಸಂಘಟನೆಗಳು ಮುಂದಾಗಿವೆ.

ಇಲ್ಲಿಯವರೆಗೂ ಕೇವಲ ಹಿಂದೂ ಸಂಘಟನೆಗಳು ಮಾತ್ರ ಅಕ್ರಮ ಗೋವು ಸಾಗಾಟಕದ ವಿರುದ್ಧ ರಸ್ತೆಗಿಳಿಯುತ್ತಿದ್ದವು. ಆದರೆ ಈಗ ಮುಸ್ಲಿಂ ಸಂಘಟನೆಗಳು ಇದಕ್ಕೆ ಕೈಜೋಡಿಸಿವೆ.
`ಅಕ್ರಮ ಗೋ ಸಾಗಾಟ ಸಂರಕ್ಷಣಾ ಸಮಿತಿ’ ಹೆಸರಿನಲ್ಲಿ ಶೀರ್ಘದಲ್ಲಿಯೇ ಸಂಘಟನೆಯೊಂದು ಅಸ್ತಿತ್ವಕ್ಕೆ ಬರಲಿದೆ ಎಂದು ರಾಜ್ಯ ಮುಸ್ಲಿಂ ಲೀಗ್ ನಯುವ ವಿಭಾಗ ಇದರ ನೇತೃತ್ವ ವಹಿಸಲಿದೆ.

ಅಕ್ರಮ ಗೋವುಗಳ ಸಾಗಾಟದ ವಿಚಾರದಲ್ಲಿ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸಮಿತಿ ಕಾರ್ಯನಿರ್ವಹಿಸಲಿದೆ. ಸಮಿತಿಯು ಅಕ್ರಮ ಗೋವು ಸಾಗಾಟ ಮಾಡುವವರ ಪಟ್ಟಿಯನ್ನು ಸಿದ್ಧಪಡಿಸಿ ಅವರಿಗೆ ಮನವರಿಕೆಯನ್ನು ಮಾಡುವ ಪ್ರಯತ್ನವನ್ನು ಮಾಡಲಿದೆ. ಇದಕ್ಕೆ ಒಪ್ಪದಿದ್ದ ಪಕ್ಷದಲ್ಲಿ ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಯೂತ್ ಲೀಗ್ ಮುಖಂಡ ಸಿದ್ದಿಕ್ ತಲಪಾಡಿ ತಿಳಿಸಿದ್ದಾರೆ.