ಬೆಂಗಳೂರು:(ಫೆ18): ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯ ಕುರಿತು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಟ್ವೀಟ್ ಮಾಡಿದ್ದರು, ಇದಕ್ಕೆ ಐಜಿಪಿ ರೂಪಾ ಗರಂ ಆಗಿ ಪ್ರಿಯಾಂಕಾ ಚೋಪ್ರಾ ಟ್ವೀಟ್‍ಗೆ ತಿರುಗೇಟು ನೀಡಿದ್ದಾರೆ.

ಪ್ರಿಯಾಂಕಾ ತಮ್ಮ ಟ್ವಿಟರ್‍ನಲ್ಲಿ ” ಪುಲ್ವಾಮದಲ್ಲಿ ಉಗ್ರರು ಯೋಧರ ಮೇಲೆ ದಾಳಿ ನಡೆಸಿರುವುದು ಶಾಕ್ ಆಗಿದ್ದು, ದ್ವೇಷಿಸುವುದು ಉತ್ತರವಲ್ಲ. ಹುತಾತ್ಮರಾದ ಯೋಧರ ಕುಟುಂಬಕ್ಕೆ ಹಾಗೂ ಗಾಯಾಳು ಯೋಧರಿಗೆ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದರು. ಇಲ್ಲಿ “ದ್ವೇಷಿಸುವುದು ಉತ್ತರವಲ್ಲ” ಎಂದು ಟ್ವೀಟ್‍ನಲ್ಲಿ ಹೇಳಿರುವುದರಿಂದ ವಿರೋಧಗಳು ವ್ಯಕ್ತವಾಗುತ್ತಿವೆ.

ಪ್ರಿಯಾಂಕಾ ಟ್ವೀಟ್‍ಗೆ ಐಜಿಪಿ ರೂಪಾ ಟ್ವೀಟ್ ಮಾಡಿ ಸರಿಯಾದ ಉತ್ತರವನ್ನು ಕೊಟ್ಟಿದ್ದಾರೆ. ಯೋಧರ ಮೇಲೆ ದಾಳಿಯಾಗಿರುವುದು ಪ್ರೀತಿ-ದ್ವೇಷದ ಸಿನಿಮಾ ಕತೆಯಲ್ಲ, ಒಂದು ದೇಶದ ಮೇಲ್ಲಾಗಿರುವ ದಾಳಿ, ಶಾಂತಿಯುತ ಅಸ್ತಿತ್ವದ ಮೇಲೆ ಅಕ್ರಮ ಶಕ್ತಿಗಳು ನಡೆಸುವ ದಾಳಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ರೂಪಾ ಅವರ ಟ್ವೀಟ್‍ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.