ಬೆಂಗಳೂರು(ಜೂನ್.13) ರಾಜ್ಯದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ರಾಜ್ಯ ಸರ್ಕಾರದ ಉಳಿವು ಮತ್ತು ಏಳಿಗೆಯ ಬಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಭವಿಷ್ಯ ನುಡಿದಿದ್ದಾರೆ.

ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿರಬೇಕಿತ್ತು. ಮೈತ್ರಿ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಪಕ್ಷ ಮತ್ತಷ್ಟು ಬೆಳೆಯುತ್ತಿತ್ತು. ನಮಗೆ ಜೆಡಿಎಸ್ ಜೊತೆ ಮೈತ್ರಿ ಹೊಂದಿಕೆಯಾಗಲ್ಲ. ಮೈತ್ರಿಯಿಂದಲೇ ನಾವು ಲೋಕಸಭಾ ಸಮರದಲ್ಲಿ ಸೋಲಬೇಕಾಯ್ತು. ಕಾಂಗ್ರೆಸ್ ವಿರೋಧ ಪಕ್ಷದಲ್ಲಿಯೇ ಕುಳಿತುಕೊಳ್ಳುವುದು ಉತ್ತಮ ಎಂದಿದ್ದಾರೆ.

ಯಡಿಯೂರಪ್ಪಗೆ ಸಿಎಂ ಆಗೋದಕ್ಕೆ ಬಹಳ ಆಸೆಯಿದೆ. ಆದರೆ ಯಡಿಯೂರಪ್ಪ ಸಿಎಂ ಆಗೋ ಅವಕಾಶ ಕಷ್ಟವಿದೆ. ಯಡಿಯೂರಪ್ಪರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದರು ಆಶ್ಚರ್ಯ ಪಡಬೇಕಿಲ್ಲ ಎಂದಿದ್ದಾರೆ.

ಸಮ್ಮಿಶ್ರ ಸರ್ಕಾರ ಕೇವಲ 8-9 ತಿಂಗಳು ಮಾತ್ರ ಉಳಿಯಬಹುದು. ಅನಿವಾರ್ಯ ಪರಿಸ್ಥಿತಿಯಲ್ಲಿ ಅವಕಾಶವಾದಿಗಳ ಮೇಲುಗೈ ಇರುತ್ತೆ. ಕಾಂಗ್ರೆಸ್ ಹೈಕಮಾಂಡ್ ಮೇಲೆ ನನಗೆ ನಂಬಿಕೆ ಇದೆ. ಅವಕಾಶವಾದಿಗಳಿಗೆ ಅವಕಾಶ ಕೊಡಲ್ಲವೆಂದು ನಂಬಿಕೆ ಇದೆ. ಪಕ್ಷೇತರ ಶಾಸಕ ಶಂಕರ್ ಓರ್ವ ದೊಡ್ಡ ಅವಕಾಶವಾದಿ ಎಂದಿದ್ದಾರೆ.

ಮುಂದಿನ ವರ್ಷ 3 ತಿಂಗಳೊಳಗೆ ಮಧ್ಯಂತರ ಚುನಾವಣೆ ಗ್ಯಾರಂಟಿ ಎಂಬುದಕ್ಕೆ ನನ್ನ ಬಳಿ ಕಾರಣವಿದೆ ಎಂದು ನುಡಿದಿದ್ದಾರೆ.