ನ್ಯೂಯಾರ್ಕ್:(ಫೆ20): ಕಾಶ್ಮೀರದ ಪುಲ್ವಾಮದಲ್ಲಿ ನಡೆದೆ ಉಗ್ರರ ದಾಳಿಯಿಂದ ಭಾರತೀಯ 44 ಜನ ಯೋಧರು ಹುತಾತ್ಮರಾಗಿದ್ದಾರೆ. ಇದರಿಂದ ಉಗ್ರರ ದಾಳಿಯನ್ನು ವಿರೋಧಿಸಿ ಅಮೇರಿಕಾದ ಅನಿವಾಸಿ ಭಾರತೀಯರು ಚೀನಾ, ಪಾಕ್ ರಾಯಭಾರಿ ಕಚೇರಿಯ ಎದುರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಭಾರತದ ಮೇಲೆ ಉಗ್ರರ ದಾಳಿಗೆ ಪಾಕಿಸ್ತಾನದ ಜೊತೆಗೆ ಚೀನಾ ಕೂಡ ಬೆಂಬಲ ನೀಡುತ್ತಿದೆ ಎಂದು ಪ್ರತಿಭಟನಾಕಾರರು ಹೇಳುವುದರ ಜೊತೆಗೆ ಭಯೋತ್ಪಾದನ ಚಟುವಟಿಕೆ ಕುಮ್ಮಕ್ಕು ನೀಡುತ್ತಿರುವ ಪಾಕ್ ಮತ್ತು ಚೀನಾ ದೇಶಗಳ ವಿರುದ್ಧ ಹೋರಾಡುವುದು ಈ ಪ್ರತಿಭಟನೆಯ ಉದ್ದೇಶ ಎಂದಿದ್ದಾರೆ.

ನಾಳೆ ಅಮೇರಿಕಾದ ಚಿಕಾಗೊದಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯ ಎದುರು ಮೊದಲು ಪ್ರತಿಭಟನೆ ನಡೆಸಿ ನಂತರ ಚೀನಾ ರಾಯಭಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನೆಯ ವೇಳೆ ಮೊಂಬತ್ತಿಯನ್ನು ಹಿಡಿದು ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎನ್ನಲಾಗಿದೆ.

ಉಗ್ರರನ್ನು ಸಾಕುವ ಕೆಲಸ ಪಾಕ್ ಮಾಡುತ್ತಿದೆ. ಭಯೋತ್ಪಾದನೆಯನ್ನು ಪ್ರೇರೇಪಿಸುತ್ತಿರುವ ದೇಶದ ವಿರುದ್ಧ, ಅಮೇರಿಕಾ ಸೇರಿದಂತೆ ಬೇರೆ ದೇಶಗಳು ಹೋರಾಡಲು ಇದು ಒಳ್ಳೆಯ ಸಮಯ ಎಂದು ಅಮೇರಿಕಾದ ಅನಿವಾಸಿ ಭಾರತೀಯರಾದ ಡಾ. ಭರತ್ ಭರಣಿ ಹೇಳಿದ್ದಾರೆ.