ಬೆಂಗಳೂರು(ಜೂನ್.27) ಬೆಂಗಳೂರಿನಲ್ಲಿ ಪ್ರಸ್ತುತ ನೂತನ ಅಪಾರ್ಟ್‍ಮೆಂಟ್ ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಮುಂದಿನ 5 ವರ್ಷಗಳ ಕಾಲ ಹೊಸ ಅಪಾರ್ಟ್‍ಮೆಂಟ್ ಕಟ್ಟಬೇಡಿ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನೀರಿನ ಕೊರತೆ ಅಧಿಕವಾಗಿದ್ದು, ದಿನನಿತ್ಯ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ನೀರಿನ ಕೊರತೆಯಿಂದಾಗಿ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನೀರನ್ನು ಮಿತವಾಗಿ ಬಳಸುವ ಅವಶ್ಯಕತೆ ಇದೆ.

ಮುಂದಿನ 5 ವರ್ಷಗಳ ಕಾಲ ಅಪಾರ್ಟ್‍ಮೆಂಟ್ ಗಳನ್ನು ಕಟ್ಟುವುದನ್ನು ಬಿಡಿ. ಅಪಾರ್ಟ್‍ಮೆಂಟ್ ಗಳನ್ನು ಕಟ್ಟುವುದಕ್ಕೆ ಸಾಕಷ್ಟು ನೀರು ಬೇಕು. ಇಂದು ಕುಡಿಯುವದಕ್ಕೆ ನೀರಿಲ್ಲದ ಪರಿಸ್ಥಿತಿ ಇರುವುದರಿಂದ ಇನ್ನು ಕಟ್ಟಡ ಕಟ್ಟುವುದಕ್ಕೆ ಎಲ್ಲಿಂದ ನೀರು ತರೋದು. ಕಟ್ಟಡಕ್ಕೆ ಬಳಸುವಂತಹ ನೀರು ಕುಡಿಯುವದಕ್ಕೆ ಉಪಯೋಗಿಸಿಕೊಂಡರೆ ನೀರಿನ ಕೊರತೆ ಇರುವುದಿಲ್ಲ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.