ಬೆಂಗಳೂರು(ಜೂ.06): ಕೇರಳದಲ್ಲಿ ಆತಂಕ ಹುಟ್ಟಿಸಿರುವ ನಿಫಾ ವೈರಸ್ (ಬಾವಲಿ ಜ್ವರ)ದ ಸೋಂಕು ಕರ್ನಾಟಕದಲ್ಲೂ ಸಹ ಈಗ ಭಯ ಸೃಷ್ಟಿಸಿದೆ. ಕೇರಳಕ್ಕೆ ಹೊಂದಿಕೊಂಡಿರುವ 8 ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದತೆ 8 ಜಿಲ್ಲೆಗಳಲ್ಲಿ ನಿಗಾ ವಹಿಸಲಾಗಿದೆ. ಈ ಕುರಿತು ಸರ್ಕರ ಹೆಚ್ಚಿನ ಗಮನ ಹರಿಸಿದ್ದು, ಪ್ರತಿದಿನ ವೈದ್ಯಕೀಯ ವರದಿ ನೀಡಲು ತಿಳಿಸಿದೆ. ಇನ್ನು ನಿಫಾ ಸೋಂಕು ಪತ್ತೆಯಾದಲ್ಲಿ ಅವರನ್ನು ಜನರಿಂದ ಪ್ರತ್ಯೇಕಿಸಲು ಹಾಗೂ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಕೇರಳದ ಎರ್ನಾಕುಳಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾಲೇಜು ವಿದ್ಯಾರ್ಥಿಯಲ್ಲಿ ಈ ವೈರಸ್ ಪತ್ತೆಯಾಗಿದ್ದು, ಕೇರಳಕ್ಕೆ ತೆರಳುವವರಿಗೆ ಮಾಸ್ಕ್ ಧರಿಸಿ ತೆರಳಲು ಸೂಚಿಸಲಾಗಿದೆ.