ಮಂಗಳೂರು(ಏ:02): ಸೋಮವಾರ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿ , ಮಂಡ್ಯದಲ್ಲಿ ದರ್ಶನ್ ಮತ್ತು ಯಶ್ ಪ್ರಚಾರ ಮಾಡುವುದರಿಂದ ಪಕ್ಷಕ್ಕೆ ಹಿನ್ನಡೆಯಾಗಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಿಖಿಲ್ ಕುಮಾರಸ್ವಾಮಿ ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದಿದ್ದಾರೆ.

ರಾಜಕಾರಣ ಯಾರು ಬೇಕಾದರೂ ಮಾಡಬಹುದು,ಯಾರು ಬೇಕಾದರೂ ಪ್ರಚಾರ ಮಾಡಬಹುದು,ನಮ್ಮದು ಏನೂ ಅಭ್ಯಂತರವಿಲ್ಲ, ನಾವು ಮಾಡುವ ಕೆಲಸ, ನಮ್ಮ ಸಾಧನೆ, ನಮ್ಮ ಆಚಾರ ವಿಚಾರವನ್ನು ಪ್ರಚಾರ ಮಾಡಿ ಮತಯಾಚಿಸುತ್ತೇವೆ ಎಂದರು.