ಬೆಂಗಳೂರು:(ಡಿ19): ಜನವರಿ 01 ರಿಂದ ಕೇಬಲ್ ಮತ್ತು ಡಿಟಿಎಚ್‍ಗಳಿಗೆ ಹೊಸ ದರ ವ್ಯವಸ್ಥೆ ಜಾರಿಯಾಗಲಿದೆ.

ಈ ಹೊಸದರದ ಅನ್ವಯ ಆಪರೇಟರ್‍ಗಳು ಗ್ರಾಹಕರ ಆಯ್ಕೆಯ ಚಾನೆಲ್‍ಗಳನ್ನು ಮಾತ್ರ ನೀಡಬೇಕು. ಅದಕ್ಕೆ ಅನುಗುಣವಾಗಿ ದರವನ್ನು ನಿಗಧಿಪಡಿಸಬೇಕು ಎನ್ನಲಾಗಿದೆ. ಗ್ರಾಹಕರು ಈ ದರ ವ್ಯವಸ್ಥೆಗೆ ವರ್ಗಾವಣೆ ಆಗದಿದ್ದರೆ ಟಿ.ವಿಯಲ್ಲಿ ಏನೂ ಬರುವುದಿಲ್ಲ ಎನ್ನಲಾಗಿದೆ.

ಇನ್ನೂ ಅಗತ್ಯವಾದ ಸಾಫ್ಟ್‍ವೇರ್ ಮತ್ತು ವೆಬ್ ಪೋರ್ಟಲ್ ವ್ಯವಸ್ಥೆ ಮಾಡಿಕೊಳ್ಳದಿರುವುದರಿಂದ, ಹೊಸ ವರ್ಷದ ಆರಂಭದಲ್ಲಿ ದೂರದರ್ಶನದ 26 ಚಾನೆಲ್‍ಗಳು ಮಾತ್ರಸಿಗುತ್ತವೆ. ಖಾಸಗಿ ಚಾನೆಲ್‍ಗಳು ಬಿತ್ತರವಾಗುವುದಿಲ್ಲವೆಂದು ಮೂಲಗಳು ತಿಳಿಸಿವೆ.