ನವದೆಹಲಿ(ನ.13) ಐಪಿಎಲ್ 13ನೇ ಆವೃತ್ತಿಯು ಮುಕ್ತಾಯಗೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡ 5ನೇ ಭಾರಿ ಟ್ರೋಫಿಯನ್ನು ಗೆದ್ದುಕೊಂಡಿದೆ. ಐಪಿಎಲ್ ಮುಗಿದ ಬೆನ್ನಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು, ಆಸ್ಟ್ರೇಲಿಯಾದಲ್ಲಿ ಹೊಸ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ 3 ಏಕದಿನ 3 ಟಿ20 ಹಾಗೂ 4 ಟೆಸ್ಟ್ ಮ್ಯಾಚ್ ಆಡಲಿದೆ. ಆಸ್ಟ್ರೇಲಿಯಾದಲ್ಲಿ ಮತ್ತು ಟೀಮ್‌ ಇಂಡಿಯಾದ ಎರಡೂ ಆಟಗಾರರು ಸೀಮಿತ ಓವರ್‌ಗಳ ಸರಣಿಯಲ್ಲಿ ನೂತನ ಜೆರ್ಸಿಯನ್ನು ಧರಿಸಲಿದ್ದಾರೆ. 70ರ ದಶಕದ ಜೆರ್ಸಿಯಿಂದ ಸ್ಪೂರ್ತಿಯನ್ನು ಪಡೆದು ಈ ಜರ್ಸಿಯನ್ನು ತಯಾರಿಸಲಾಗಿದ್ದು, 70ರ ದಶಕದ ಸವಿನೆನಪುಗಳನ್ನು ವೀಕ್ಷಿಸಬಹುದಾಗಿದೆ.

ಟೀಮ್ ಇಂಡಿಯಾದ ಹೊಸ ಜರ್ಸಿ ನೇವಿ ಬ್ಲೂ ಬಣ್ಣವನ್ನು ಹೊಂದಿದ್ದು, MPL‌ ಸ್ಫೋರ್ಟ್ಸ್‌ ಭಾರತ ತಂಡದ ಕಿಟ್‌ ಹಾಗೂ ಜೆರ್ಸಿ ಪ್ರಾಯೋಜಕತ್ವ ವಹಿಸಿಕೊಂಡಿದೆ. ಮುಂದಿನ ಮೂರು ವರ್ಷಗಳ ಕಾಲ MPL‌ 120 ಕೋಟಿ ರೂ.ಗಳಿಗೆ BCCI ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ.