ಬೆಂಗಳೂರು:(ಜ16); ಸ್ಯಾಂಡಲ್‍ವುಡ್ ಸಿನಿಮಾದಲ್ಲಿ ನಟಿಸಲು ತಯಾರಾಗಿದ್ದಾರೆ. ಪ್ರಜ್ವಲ್ ದೇವರಾಜ್ ಪತ್ನಿ ರಾಗಿನಿ ಚಂದ್ರನ್.

ರಾಗಿನಿ ಚಂದ್ರನ್ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ಹೊಸ ಸಿನಿಮಾಕ್ಕೆ ನಾಯಕನಾಗಿ ನಟಿಸಲ್ಲಿದ್ದಾರಂತೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಪವರ್‍ಸ್ಟಾರ್ ನಾಯಕ ನಟನಾಗಿ ನಟಿಸುವ ಜೊತೆಗೆ ಚಿತ್ರ ನಿರ್ಮಾಣ ಅವರೆ ಮಾಡುತ್ತಿದ್ದಾರೆ.

ಈ ಚಿತ್ರವನ್ನು ರಘು ಸಮರ್ಥ ನಿರ್ದೇಶನ ಮಾಡುತ್ತಿದ್ದಾರಂತೆ. ಇನ್ನೂ ಚಿತ್ರತಂಡ ಹೊಸ ಚಿತ್ರಕ್ಕೆ ಟೈಟಲ್ ಹುಡುಕುವುದರಲ್ಲಿ ಬ್ಯುಸಿಯಾಗಿದೆ.

ಒಟ್ಟಾರೆ ಮಹಿಳಾ ಪ್ರಧಾನ ಚಿತ್ರ ಒಂದರ ಮೂಲಕ ಸ್ಯಾಂಡಲ್‍ವುಡ್‍ಗೆ ಹೊಸ ನಟಿ ರಾಗಿನಿ ಚಂದ್ರನ್ ಎಂಟ್ರಿಕೊಡ್ತಾಯಿದ್ದಾರೆ.