ಲಂಡನ್: ಭಾರತದಲ್ಲಿ ಬಹುಕೋಟಿ ರೂಪಾಯಿ ವಂಚಿಸಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಆಭರಣ ವಿನ್ಯಾಸಕಾರ ನೀರವ್ ಮೋದಿ ಯನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ.

ಕೆಲ ದಿವಸಗಳ ಹಿಂದಷ್ಟೆ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನ 13,000 ಕೋಟಿ ರೂ. ಹಗರಣದ ಪ್ರಮುಖ ಆರೋಪಿ ಆಗಿರುವ ನೀರವ್​ ಸದ್ಯ ಲಂಡನ್​ನಲ್ಲಿ ತಲೆಮರಿಸಿಕೊಂಡಿದ್ದಾರೆ. ಅವರನ್ನು ಗಡೀಪಾರು ಮಾಡುವ ಭಾರತದ ಕೋರಿಕೆಯನ್ನು ಗೃಹಸಚಿವಾಲಯದ ಕಾರ್ಯದರ್ಶಿ ಸಾಜಿದ್​ ಜಾವೀದ್​ ದೃಢೀಕರಿಸಿದ ನಂತರ ಲಂಡನ್​ನ ವೆಸ್ಟ್​ಮಿನ್​ಸ್ಟರ್​ ನ್ಯಾಯಾಲಯ ಅರೆಸ್ಟ್​​ ವಾರಂಟ್​ ಹೊರಡಿಸಿತ್ತು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಧಾನ ಆರೋಪಿ ನೀರವ್ ಮೋದಿ ಪ್ರಸ್ತುತ ಪಶ್ಚಿಮ ಲಂಡನ್‌ನ 80 ಲಕ್ಷ ಪೌಂಡ್ ಬೆಲೆ ಬಾಳುವ ಐಷಾರಾಮಿ ಬಂಗಲೆಯಲ್ಲಿ ವಾಸವಾಗಿದ್ದಾರೆ. ಭಾರತ ನೀರವ್ ಮೋದಿ ಗಡಿಪಾರಿಗೆ ಮನವಿ ಸಲ್ಲಿಸಿದೆ ಎಂದು ಯುಕೆಯ ಗೃಹ ಕಾರ್ಯದರ್ಶಿ ಸಾಜಿದ್ ಜಾವೇದ್ ಕೋರ್ಟ್‌ ನಲ್ಲಿ ತಿಳಿಸಿದ್ದಾರೆ.