ಬೆಂಗಳೂರು:(ಫೆ07): ನಿನ್ನೆ ರಾತ್ರಿಯಿಂದ ಪುನೀತ್ ಅಭಿಮಾನಿಗಳಿಗಂತೂ ಹಬ್ಬದ ದಿನವೆಂದೇ ಹೇಳಬಹುದು. ಬಹುದಿನಗಳಿಂದ ನಟಸಾರ್ವಭೌಮನ ಬರುವಿಕೆಯನ್ನು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ನಟಸಾರ್ವಭೌಮ ಎಂಟ್ರಿಕೊಟ್ಟಿರುವುದು ಸಂತೋಷತಂದಿದೆ.

ಪವನ್ ಒಡೆಯರ್ ನಿರ್ದೇಶನದ, ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ನಟಸಾರ್ವಭೌಮ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಸದ್ದು ಮಾಡಿದ್ದು, ಚಿತ್ರದ ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋ ಸಾಂಗ್‍ಗೆ ಲೈಕ್‍ಗಳ ಸುರಿಮಳೆಯೆ ಬಂದಿದ್ದವು.

ಇದರಲ್ಲಿ ಪವರ್‍ಸ್ಟಾರ್ ನಟಸಾರ್ವಭೌಮನಾಗಿ ಕಾಣಿಸಿಕೊಂಡಿರುವುದು, ಜೊತೆಗೆ ಅವರ ಲುಕ್ ಪ್ಯಾನ್ಸ್‍ಗೆ ಲೈಕ್ ಆಗಿದೆ ಎಂಬುದಕ್ಕೆ ,ನಟಸಾರ್ವಭೌಮ ಸಿನಿಮಾದ ಕಟ್‍ಔಟ್ ಮುಂದೆ ಅಭಿಮಾನಿಗಳಲ್ಲಿ ಮನೆಮಾಡಿದ ಸಂಭ್ರಮದ ವಾತಾವರಣ ಸಾಕ್ಷಿಯಾಗಿದೆ.

ಇನ್ನು ಡಿಂಪಲ್ ಕ್ವೀನ್ ರಚಿತಾ ಹಾಗೂ ಅನುಪಮ ಪರಮೇಶ್ವರ್ ನಾಯಕಿಯಾಗಿ ನಟಿಸಿದ್ದು, ಅನುಪಮ ಪರಮೇಶ್ವರ್ ಅವರಿಗೆ ಇದು ಕನ್ನಡದ ಮೊದಲ ಚಿತ್ರವಾಗಿದೆ.

ಕರ್ನಾಟಕದ ಹೃದಯ ಭಾಗ ಬೆಂಗಳೂರಿನಲ್ಲಿ ಮೊದಲ ದಿನವೇ 500ಕ್ಕೂ ಹೆಚ್ಚು ಶೋಗಳು ನಟಸಾರ್ವಭೌಮನಿಗೆ ಮೀಸಲಿಡಲಾಗಿತ್ತು ಎನ್ನಲಾಗಿದೆ. ಈ ವರ್ಷ ಸ್ಯಾಂಡಲ್‍ವುಡ್‍ನಲ್ಲಿ ತೆರೆ ಕಂಡ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.