2019 ರಲ್ಲಿ ಕನ್ನಡ ಚಿತ್ರರಂಗ ಸಾಧನೆಯತ್ತ ಮುಖ ಮಾಡಿದೆ. ಹೌದು ದೊಡ್ಡ ಬಜೆಟ್‍ನ ಸಿನಿಮಾಗಳು ತೆರೆಕಾಣುತ್ತಿವೆ. ಈಗ ನಟ ಸಾರ್ವಭೌಮ ಸಿನಿಮಾ ತೆರೆಗೆ ಬರುವ ಡೇಟ್ ಫಿಕ್ಸಾಗಿದೆ.

ಈಗಾಗ್ಲೇ ಸಿನಿಮಾದ ಟೀಸರ್ ಹಾಗೂ ಲಿರಿಕಲ್ ವೀಡಿಯೊ ಸಾಂಗ್ ಬಿಡುಗಡೆಯಾಗಿದ್ದು, ನಟ ಸಾರ್ವಭೌಮನಿಗೆ ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

ಇನ್ನು ಈಗಾಗ್ಲೆ ಸೆನ್ಸಾರ್‍ನಲ್ಲಿ ನಟಸಾರ್ವಭೌಮನಿಗೆ ಸರ್ಟಿಫಿಕೇಟ್ ಸಿಕ್ಕಿದ್ದು, ಜನವರಿ 25 ರಂದು ಟ್ರೈಲರ್ ರಿಲೀಸ್ ಆಗ್ತಾಯಿದೆ, ಇನ್ನೇನು ಟ್ರೈಲರ್ ರಿಲೀಸ್ ಆಗಿ ಕೆಲವೇ ದಿನಗಳ ನಂತ್ರ ಅಂದ್ರೆ ಫೆಬ್ರವರಿ 07 ರಂದು ಸಿನಿಮಾ ಥಿಯೇಟರ್ಗೆ ಫಿಕ್ಸ್ ಎಂದು ಸಿನಿಮಾದ ನಿರ್ದೇಶಕರಾದ ಪವನ್ ಒಡೆಯರ್ ಟ್ವೀಟ್ ಮಾಡಿದ್ದಾರೆ.

ಒಟ್ಟಾರೆ ಚಂದನವನಕ್ಕೆ ಚಂದನದ ಗಾಳಿ ಬೀಸಿದೆ. ಈ ಚಂದನದ ಸುಗಂಧವನ್ನು ಎಲ್ಲೆಡೆ ಬೀಸಲು ಹೊರಟಿದೆ ಸ್ಯಾಂಡಲ್‍ವುಡ್.