ನಟ ಸಾರ್ವಭೌಮ ಸಿನಿಮಾದ ಲಿರಿಕಲ್ ವೀಡಿಯೋ ಸಾಂಗ್ ನಿನ್ನೆ ರಿಲೀಸ್ ಆಗಿದ್ದು. ಪವರ್ ಸ್ಟಾರ್ ಸ್ಮಾರ್ಟ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಡಿಂಪಲ್‍ಕ್ವೀನ್ ರಚಿತಾ ಪವರ್‍ಸ್ಟಾರ್‍ಗೆ ಸೋತು ಹೋಗಿದ್ದಾರೆ. ಜೊತೆಗೆ ಮಲಯಾಳಂ ನಟಿ ಅನುಪಮ ಪರಮೇಶ್ವರ್ ಕೂಡ ಹಾಡಿನಲ್ಲಿಯೇ ಆ್ಯಟ್ರಾಕ್ಟಿವ್‍ವಾಗಿ ಕಾಣಿಸಿಕೊಂಡಿದ್ದು. ಇದು ಅವರಿಗೆ ಸ್ಯಾಂಡಲ್‍ವುಡ್‍ನಲ್ಲಿ ನಟಿಸುತ್ತಿರುವ ಮೊದಲ ಸಿನಿಮಾವಾಗಿದೆ.

ಯಾರೋ ನಾನು, ಯಾರೋ ನೀನೂ ನಂದು ನಿಂದು ಮುಂದೆಯೇನೊ ಎಂಬ ಹಾಡಿನ ಸಾಲುಗಳು ಸಿನಿಮಾದಲ್ಲಿ ಏನಿದೆ ಎಂಬುದನ್ನು ಕುತೂಹಲ ಮೂಡಿಸುತ್ತದೆ.

ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ನಟಿಸುತ್ತಿರುವುದು. ಅಭಿಮಾನಿಗಳಲ್ಲಿ ಒಂತರ ಕುತೂಹಲದ ಜೊತೆಗೆ ಆಸಕ್ತಿ ಹುಟ್ಟಿಸುತ್ತೆ ಎನ್ನಬಹುದು.