ಬೆಂಗಳೂರು:( ಜ25): ಇಂದು ಪುನೀತ್ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ದಿನ ಅಂದರೆ ನಟಸಾರ್ವಭೌಮ ಸಿನಿಮಾದ ಅಫೀಷಿಯಲ್ ಟ್ರೈಲರ್ ರಿಲೀಸ್ ಆಗಿದೆ.

ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಸಿನಿಮಾದ ಟ್ರೈಲರ್ ನೋಡಿದರೆ ಒಂಥರಾ ಕುತೂಹಲ ಮೂಡಿಸಿದೆ.

ಟ್ರೈಲರ್ ನೋಡಿದ ಮೊದಲಿಗೆ ಇದು ಹಾರರ್ ಮೂವಿನ ಅನಿಸುತ್ತೆ ಯಾಕಂದ್ರೆ ಕಾಮಿಡಿ ಮಾಡುವುದಲ್ಲಿ ಫೇಮಸ್ ಅಂತಾನೇ ಹೆಸರಾದ ಚಿಕ್ಕಣ್ಣ ಹೇಳಿರುವ ಮಾತು ಒಂಥರಾ ಇಂಟ್ರೆಸ್ಟಿಂಗ್ ಜೊತೆಗೆ ಈ ಸಿನಿಮಾದಲ್ಲಿ ಏನಿದೆ ಎಂಬುದು ಯೋಚನೆಗೆ ಬರುವುದು ಸಹಜ.

ಇನ್ನು ಪವರ್ ಸ್ಟಾರ್ ಟ್ರೈಲರ್ ನಲ್ಲಿ ಪವರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ˌ ಡಿಂಪಲ್ ಕ್ವೀನ್ ರಚಿತಾ ಡಿಫ್ರೆಂಟ್ ಆಗಿ ಎಂಟ್ರಿ
ಕೊಟ್ಟಿದ್ದಾರೆ.

ಒಟ್ಟಿನಲ್ಲಿ ನಟಸಾರ್ವಭೌಮ ಸಿನಿಮಾದ ಟ್ರೈಲರ್ ಖಡಕ್ ಆಗಿ ಮೂಡಿಬಂದಿದ್ದು ˌ ಪವರ್ ಸ್ಟಾರ್ ಅಭಿಮಾನಿಗಳಿಗೆ ಇಂದು ಸಂತೋಷದ ದಿನವಾಗಿದೆ.