ಅಮರಾವತಿ(ಡಿ :೨೪): ಮಾತಿನ ಸರದಾರ ಮೋದಿ ಅವರಿಂದ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಅಂದ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟೀಕಿಸಿದ್ದಾರೆ . ಸಂಸತ್ತಿನಲ್ಲಿ ಅಂದ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದನ್ನು ಮೋದಿ ಸರ್ಕಾರ ತಿರಸ್ಕರಿಸಿತು ಎಂದು ಕಿಡಿ ಕಾರಿರುವ ಅವರು, ಮೋದಿಯವರಿಂದ ದೇಶಕ್ಕೆ ಏನೂ ಉಪಯೋಗವಾಗಿಲ್ಲ ಸ್ವಂತ ಗುಜರಾತನ್ನು ೧೨ ವರ್ಷ ಆಳಿದರೂ ಅಲ್ಲಿ ಹೇಳಿಕೊಳ್ಳುವ ಪ್ರಗತಿ ಆಗಿಲ್ಲ ತಾವು ಏನೋ ಘನವಾದದ್ದನ್ನು ಸಾಧಿಸಿದ್ದೇನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿ ಅವರೊಬ್ಬ ಪೊಳ್ಳು ಮನುಷ್ಯ ಎಂದು ಮೋದಿ ಅವರನ್ನು ಜರಿದಿದ್ದಾರೆ .