ನವದೆಹಲಿ(ಜ.09): ಭಾರತೀಯ ರಿಸರ್ವ ಬ್ಯಾಂಕ್ ನೂತನವಾಗಿ ರಚಿಸಿರುವ ಡಿಜಿಟಲ್ ಪಾವತಿ ವಿಶೇಷ ಸಮಿತಿಯ ಅಧ್ಯಕ್ಷರಾಗಿ ನಂದನ್ ನಿಲೇಕಣಿ ಅವರನ್ನು ನೇಮಕ ಮಾಡಲಾಗಿದೆ. ಆಧಾರ್ ಯೋಜನೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಂದನ್ ನಿಲೇಕಣಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಈ ಸಮಿತಿಯು ದೇಶದಲ್ಲಿನ ಪಾವತಿಗಳ ಡಿಜಿಟಲೀಕರಣ ಸ್ಥಿತಿಯನ್ನು ಪರಿಶೀಲಿಸುತ್ತದೆ ಮತ್ತು ಹಣಕಾಸಿನ ಸೇರ್ಪಡೆಗೆ ಪ್ರಸ್ತುತದ ಡಿಜಿಟಲ್ ಪಾವತಿಗಳ ಹಂತಗಳನ್ನು ನಿರ್ಣಯಿಸಲಿದೆ. ಜೊತೆಗೆ ನೂತನ ಯೋಜನೆಗಳು, ಡಿಜಿಟಲ್ ಪಾವತಿಯ ಸಾಧಕ-ಬಾಧಕಗಳು, ಡಿಜಿಟಲ್ ಪಾವತಿಯ ಭದ್ರತೆ ಬಗ್ಗೆ ಈ ವಿಶೇಷ ಸಮಿತಿ ಆಳವಾಗಿ ಅಧ್ಯಯನ ಮಾಡಲಿದೆ ಎಂದು ಆರ್‍ಬಿಐ ತಿಳಿಸಿದೆ