ಬೆಂಗಳೂರು(ಆ:22): ರಾಜಕೀಯಕ್ಕೆ ಬರಲು ನನಗೆ ಇಷ್ಟವಿರಲಿಲ್ಲ, ರಾಜಕೀಯ ಪ್ರವೇಶ್ ಆಕಸ್ಮಿಕ ಎಂದು ಹೊಸದಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕರಾಗಿರುವ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮಂಗಳೂರಿಗೆ ಭೇಟಿ ನೀಡಿದ ವೇಳೆ ಕಟೀಲ್ ಅವರಿಗೆ ಕೊಡಿ ಬೈಲಿನಲ್ಲಿ ಅದ್ಧೂರಿ ಸ್ವಾಗತಿಸಲಾಯಿತು.ಈ ವೇಳೆ ಮಾತನಾಡಿದ ಅವರು, 12ನೇ ವಯಸ್ಸಿನಲ್ಲಿ ಆರ್ ಎಸ್ ಎಸ್ ಸೇರಿದರು, ಅನಂತರ ಆರ್ ಎಸ್‌ಎಸ್ ಪ್ರಚಾರಕ್ ಮತ್ತು ವಿಸ್ತಾರಕ್ ಆಗಿ ಸಂಘಟನೆಯ ತತ್ವ ಸಿದ್ಧಾಂತಗಳನ್ನು ವಿಸ್ತರಿಸಲು ಮುಂದಾಗಿದ್ದಾರೆ.

ಒಂದು ದಿನ ರಾಜಕೀಯಕ್ಕೆ ಬರುವಂತೆ ಕೇಳಲಾಯಿತು, ಆದರೆ ನನಗೆ ಇಷ್ಟವಿಲ್ಲ ಎಂದು ಹೇಳಿದೆ. ಆದರೆ ಮತ್ತೆ ಕೆಲವು ದಿನಗಳ ನಂತರ,ಮತ್ತೆ ರಾಜಕಿಯಕ್ಕೆ ಬರುವಂತೆ ನನ್ನ ಮೇಲೆ ಒತ್ತಡ ಹಾಕಲಾಯಿತು, ಕೆಲ ಸಮಯ ರಾಜಕೀಯದಲ್ಲಿರಿ ನಂತರ ವಾಪಸ್ ಬನ್ನಿ ಎಂದು ಹೇಳಿದರು, ಪಕ್ಷ ಮತ್ತು ಸಂಘದ ಒತ್ತಾಯಕ್ಕೆ ನಾನು ಮಣಿಯಬೇಕಾಯಿತು. ನನಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ ಎಂದು ತಿಳಿಸಿದ್ದಾರೆ.