ಬಡಾಮೇರ್(ಜ:02): ಮುಸ್ಲಿಂ ಸಮುದಾಯದ ಸಲೇಹ್ ಮೊಹಮದ್, ಗೆಹಲೋಟ್ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ದೇವಾಲಯದಲ್ಲಿ ಪೂಜೆ ನೆರವೇರಿಸಿದ್ದಾರೆ.

ಜೈಸಲ್ಮೇರ್ ಜಿಲ್ಲೆಯ ಪೊಖ್ರಾನ್ ನ ಶಿವನ ದೇಗುಲದಲ್ಲಿ ಸಚಿವ ಸಲೇಹ್ ಮೊಹಮದ್ ಪೂಜೆ ಸಲ್ಲಿಸಿದ್ದಾರೆ.

ದೇವಾಲಯಕ್ಕೆ ಬಂದ ಸಚಿವ ಹಿಂದೂ ಸಂಪ್ರದಾಯದ ಪ್ರಕಾರ ಅರ್ಧ ಘಂಟೆಗಳ ಕಾಲ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ಮಾತನಾಡಿದ ಅವರು ನನ್ನ ನಂಬಿಕೆಯಿಂದಾಗಿ ನಾನು ದೇವಸ್ಥಾನಕ್ಕೆ ಬಂದಿದ್ದೇನೆ ಎಂದಿದ್ದಾರೆ .