ಶಿವಮೊಗ್ಗ(ಆಗಸ್ಟ್.೩೦) ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗವಟೂರು ಗ್ರಾಮದಲ್ಲಿ ಯುವತಿಗಾಗಿ ಯುವಕರ ಗುಂಪೊಂದು ಯುವಕನ ಮೇಲೆ ಚಾಕು ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಗವಟೂರು ಗ್ರಾಮದವರೇ ಆದ ಈಶ್ವರ್, ಅಭಿಷೇಕ್, ದೇವೇಂದ್ರಪ್ಪ ಮತ್ತು ಸಚಿನ್ ಎನ್ನುವವರು ಶಶಿಕುಮಾರ್ ಎಂಬಾತನ ಮೇಲೆ ಚಾಕು ಇರಿದಿದ್ದಾರೆ. ಈ ನಾಲ್ವರು ವ್ಯಕ್ತಿಗಳಿಗೆ ಸಂಬಂಧಿಯಾಗಿದ್ದ ಯುವತಿಯನ್ನು ಶಶಿಕುಮಾರ್ ಪ್ರೆÃಮಿಸುತ್ತಿದ್ದ ಎನ್ನುವ ಕಾರಣಕ್ಕೆ ಚಾಕು ಇರಿದಿರುವ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಪಟ್ಟಂತೆ ರಿಪ್ಪನ್‌ಪೇಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.