ಮುಂಬೈ(ಮಾ:15): ಗುರುವಾರ ರಾತ್ರಿ ನಗರದಲ್ಲಿ ನಡೆದ ಪಾದಚಾರಿ ಸೇತುವೆ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 6 ಕ್ಕೆ ಏರಿದ್ದು,39 ಮಂದಿಗೆ ಗಾಯಗಳಾಗಿವೆ. ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೆ ನಿಲ್ದಾಣದ ಹೊರಭಾಗದ ಪಾದಚಾರಿ ಸೇತುವೆ ತಡರಾತ್ರಿ ಕುಸಿದುಬಿದ್ದಿತ್ತು,ಸಿಗ್ನಲ್ ಸ್ವಲ್ಪ ಬೇಗ ಬಿಟ್ಟಿದ್ದರೂ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿದೆ.

ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಅವರು,ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ,ಈ ಹಿಂದೆಯೇ ಬ್ರಿಡ್ಜ್ ನ ರಚನಾತ್ಮಕ ಪರೀಕ್ಷೆ ಮಾಡಲಾಗಿತ್ತು,ಅದರಲ್ಲಿ ಬ್ರಿಡ್ಜ್ ಗಟ್ಟಿಯಾಗಿದೆ ಎಂದು ಫಲಿತಾಂಶ ಬಂದಿತ್ತು ಎಂದು ಅವರು ಹೇಳಿದ್ದಾರೆ.