(ಅ.04) ಕೆಲವು ದಿನಗಳಿಂದ ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ತಮ್ಮದೇ ಪಕ್ಷದವರ ವಿರುದ್ಧ ಗುಡುಗಿದ್ದ ವಿಜಯಪುರದ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದಿಂದ ಶೋಕಾಸ್ ನೋಟೀಸ್ ನೀಡಲಾಗಿದೆ. ನೆರೆ ಪರಿಹಾರದ ವಿಚಾರದಲ್ಲಿ ವಿಳಂಬವಾಗಿದೆ ಎಂದು ಕೆಂದ್ರ ಹಾಗೂ ರಾಜ್ಯ ಬಿಜೆಪಿ ಪ್ರಶ್ನಿಸಿದ್ದಾರೆ ಅಲ್ಲದೇ ರಾಜ್ಯದ ಕೇಂದ್ರ ಸಚಿವರು ಉಡಾಫೆ ಅಧಿಕಾರಿಗಳು ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಯಕರ ವಿರುದ್ಧ ಮಾತನಾಡಿದ್ದು ಏಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಅವರು ಕೇಂದ್ರದಿಂದ ನೋಟೀಸ್ ಜಾರಿ ಮಾಡಿದ್ದಾರೆ. ಈ ನೋಟೀಸ್ ಗೆ 10 ದಿನಗಳ ಒಳಗಾಗಿ ಉತ್ತರ ನೀಡಿದಿದ್ದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ. ನೋಟೀಸ್ ನಲ್ಲಿ ಕೇಂದ್ರ, ರಾಜ್ಯ ಬಿಜೆಪಿ ನಾಯಕರನ್ನು ಟೀಕಿಸಿದ್ದೇಕೆ, ಪಕ್ಷದ ನಾಯಕರ ವಿರುದ್ಧ ಜನತೆಯನ್ನು ಪ್ರಚೋದಿಸುತ್ತಿದ್ದೀರಾ, ನೆರೆ ಪರಿಹಾರ ವಿಚಾರದಲ್ಲಿ ಸುಳ್ಳು ಹರಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದು, ಹತ್ತು ದಿನಗಳಲ್ಲಿ ಕಾರಣ ನೀಡುವಂತೆ ಸೂಚಿಸಲಾಗಿದೆ…