ಮುಂಬೈ(ಆ:30): ದಕ್ಷಿಣ ಆಫ್ರಿಕಾ ವಿರುದ್ಧದ ಟಿ -20 ಸರಣಿಯ ಆಯ್ಕೆಯ ಪಟ್ಟಿಯಲ್ಲಿ ಧೋನಿ ಹೆಸರಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಎಂ ಎಸ್ ಕೆ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಪ್ರಸಾದ್, ದಕ್ಷಿಣ ಆಫ್ರಿಕಾ ವಿರುದ್ಧದ ಟಿ -20 ಸರಣಿಯ ಆಯ್ಕೆಯ ಪಟ್ಟಿಯಲ್ಲಿ ಧೋನಿ ಹೆಸರಿಲ್ಲ, 2019 ವಿಶ್ವಕಪ್ ಮುಗಿದ ಬೆನ್ನಲ್ಲೆ ರಜೆ ಕೇಳಿದ್ದರು . 15 ದಿನಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ವಾಪಾಸಾದರು . ಆದರೆ , ಅಧಿಕೃತವಾಗಿ ಧೋನಿಯ ರಜಾ ಅವಧಿ ಮುಕ್ತಾಯಗೊಳ್ಳುವುದು ಸೆಪ್ಟೆಂಬರ್ 21 ಕ್ಕೆ . ಹೀಗಾಗಿ ಅವರು ದಕ್ಷಿಣ ಆಫ್ರಿಕಾ ಟಿ -20 ಸರಣಿಯಿಂದ ಹೊರಗಳಿದಿದ್ದಾರೆ’ ಎಂದು ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ .