ಮುಂಬೈ (ಡಿ ೨೦): ಡಿ ೧೯ ರಂದು ನಡೆದ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ನ ಮಾಲೀಕ ಆಕಾಶ್ ಅಂಬಾನಿ ಕೊನೆಯ ನಿಮಿಷದ ಹರಾಜಿನಲ್ಲಿ ಯುವರಾಜ್ ಸಿಂಗ್ ರನ್ನು ೧ ಕೋಟಿ ರೂ ಗೆ ಖರೀದಿಸಿದರು ಹಾಗು ತಂಡಕ್ಕೆ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಲಸಿತ್ ಮಾಲಿಂಗ ಅವರನ್ನು ೨ ಕೋಟಿ ರೂಪಾಯಿಗೆ ಖರೀದಿಸಿದರು . ಹರಾಜು ಮುಗಿದ ನಂತರ ಮಾತನಾಡಿದ ಅವರು ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಯುವರಾಜ್ ಹಾಗೂ ಮಾಲಿಂಗ ಅವರಿಗೆ ಹೆಚ್ಚು ಹಣ ನೀಡಿದ್ದೇವೆ, ನಾವು ಅನುಭವಿ ಆಟಗಾರರ ಜೊತೆಗೆ ಯುವ ಆಟಗಾರರ ಬಗ್ಗೆ ಹೆಚ್ಚು ಕೇಂದ್ರೀಕರಿಸಿದ್ದೇವೆ ಎಂದಿದ್ದಾರೆ .