ವಾಷಿಂಗ್ಟನ್:(ಜ23): ಅಮೇರಿಕಾದ ಸೆನೆಟ್‍ನಲ್ಲಿ ಭಾರತೀಯ ಮೂಲದ ಮೋನಾ ದಾಸ್ ಭಗವದ್ಗೀತೆಯನ್ನು ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದು ಭಾರತೀಯರಿಗೆ ಹೆಮ್ಮೆತರುವ ವಿಷಯವಾಗಿದೆ.

ಇವರು ವಾಷಿಂಗ್ಟನ್ ರಾಜ್ಯದ 47 ನೇ ಜಿಲ್ಲೆಯ ಸೆನೆಟರ್ ಆಗಿ ಅಧಿಕಾರ ಸ್ವೀಕರಿಸಿದ್ದು, ಈ ವೇಳೆ ಅವರು ಹೆಣ್ಣು ಮಕ್ಕಳಿಗೆ ಹೆಚ್ಚು ಆಧ್ಯತೆ ನೀಡಿ. ಅವರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತೇನೆ ಎಂದಿದ್ದಾರೆ.

ಇವರು ಬಿಹಾರ ಮೂಲದವರಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಅಮೇರಿಕಾಗೆ ತೆರಳಿದ್ದರು. ಈಗ ಅಲ್ಲಿ ಭಾರತದ ಭಗವದ್ಗೀತೆಯನ್ನು ಹಿಡಿದು ಅಧಿಕಾರ ಸ್ವೀಕರಿಸಿರುವುದು ಹೆಮ್ಮೆಯ ವಿಷಯ.