ದೆಹಲಿ (ಸೆ.06) ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಎಂ ಬಿ ಪಾಟೀಲ್, ಮೋದಿ ಗ್ರೇಟ್ ಶೋ ಮ್ಯಾನ್ ಆಗಿದ್ದು ಅವರು ವಿದೇಶಿ ಪ್ರಧಾನಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ವಿಜಯಪುರದ ತಿಕೋಟದಲ್ಲಿ ಮಾತನಾಡಿದ ಎಂ ಬಿ ಪಾಟೀಲ್ ಮೋದಿ ಅವರಿಗೆ ರಾಜ್ಯದ ಪ್ರವಾಹ, ದೇಶದ ಡಿಜಿಪಿ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಅರೊಬ್ಬ ಗ್ರೇಟ್ ಶೋ ಮ್ಯಾನ್ ಆಗಿದ್ದಾರೆ. ಅವರು ಭಾರತದ ಪ್ರಧಾನಿ ಅಲ್ಲ, ಅವರು ವಿದೇಶಿ ಪ್ರಧಾನಿಯಾಗಿದ್ದಾರೆ ಎಂದರು.

ಅನರ್ಹ ಶಾಸಕರಿಂದಾಗಿ 16 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಆ ಚುನಾವಣೆಗೆ ಖರ್ಚಾಗುವ ಹಣ ಯಾರದ್ದು, ಅದು ಜನರ ದುಡ್ಡು, ಹೀಗಾಗಿ ಇವರನ್ನು ಕ್ಷೇತ್ರಗಳ ಜನತೆ ಕ್ಷಮಿಸುವುದಿಲ್ಲ ಎಂದರು. ಪ್ರವಾಹದಿಂದಾಗಿ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನವನ್ನೇ ಬಿಡುಗಡೆ ಮಾಡಿಲ್ಲ. 40 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದಾರೆ ಆದ್ರೆ ಇದುವರೆಗೂ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲೆ ಎಂದು ಆರೋಪಿಸಿದರು.