ದುಬೈ(ಏ:04): ದೇಶದೊಂದಿಗೆ ಸೌಹಾರ್ದ ಸಂಬಂಧ ಗಟ್ಟಿಗೊಳಿಸುವಲ್ಲಿ ವಹಿಸಿದ ಮಹತ್ವದ ಪಾತ್ರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ಝಾಯೆದ್’ ನೀಡಿ ಗೌರವಿಸಲಾಗಿದೆ.

“ನಮಗೆ ಭಾರತದೊಂದಿಗೆ ಐತಿಹಾಸಿಕ ಮತ್ತು ಉತ್ತಮ ಸಂಬಂಧವಿದೆ. ನನ್ನ ಪ್ರೀತಿಯ ಗೆಳೆಯ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಈ ಸಂಬಂಧ ದೃಢವಾಗಿದೆ. ಅವರ ಪ್ರಯತ್ನಗಳನ್ನು ಶ್ಲಾಘಿಸುವ ಸಲುವಾಗಿ, ಯುಎಇ ಅಧ್ಯಕ್ಷ ಮೋದಿಯವರಿಗೆ ಝಾಯೆದ್ ಮೆಡಲ್ ಪ್ರದಾನಿಸುತ್ತಿದ್ದಾರೆ” ಎಂದು ಅಬುಧಾಬಿಯ ರಾಜಕುಮಾರ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಹೇಳಿದ್ದಾರೆ.

ಉಭಯ ರಾಷ್ಟ್ರಗಳ ನಡುವಿನ ಸೌಹಾರ್ದತೆಗೆ ಶ್ರಮಿಸಿದ್ದಕ್ಕಾಗಿ ನರೇಂದ್ರ ಮೋದಿಯವರಿಗೆ ಈ ಪ್ರಶಸ್ತಿ ಘೋಷಿಸಲಾಗಿದೆ. ಮೋದಿಯವರಿಗೆ ಪ್ರಶಸ್ತಿ ಘೋಷಿಸಿದ ವಿಚಾರವನ್ನು ದೊರೆ ಮೊಹಮ್ಮದ್ ಬಿನ್ ಜಯೇದ್ ಅಲ್ ನೆಹ್ಯಾನ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.