ನವದೆಹಲಿ(ಜುಲೈ.೧೬) ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರು ಸಲ್ಲಿಸಿದಂತ ಅರ್ಜಿ ವಿಚಾರಣೆಯನ್ನು ಮಂಗಳವಾರ ಕಾಯ್ದಿರಿಸಿದ್ದು, ಸುಪ್ರೀಂ ಕೋರ್ಟ್ ಬುಧವಾರಕ್ಕೆ ಕಾಯ್ದಿರಿಸಿದೆ.

ಬುಧವಾರ ತೀರ್ಪು ಹೊರಬೀಳುವವರೆಗೂ ಹಿಂದೆ ನೀಡಿದ ಯಥಾಸ್ಥಿತಿಯ ಆದೇಶ ಮುಂದುವರಿಸುವಂತೆ ಪೀಠ ಹೇಳಿದೆ. ಅರ್ಜಿಯ ಅಂಶಗಳ ಕುರಿತು ನಡೆದ ಪರ – ವಿರೋಧ ಮಂಡನೆಯಲ್ಲಿ ಶಾಸಕರ ಪರವಾಗಿ ಮುಕುಲ್ ರೋಹಟಗಿ, ಸ್ಪೀಕರ್ ರಮೇಶ್ ಕುಮಾರ್ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಗು ಮುಖ್ಯಮಂತ್ರಿ ಕುಮಾರಸ್ವಾಮಿ ಪರವಾಗಿ ವಕೀಲ ರಾಜೀವ್ ಧವನ್ ವಾದ ಮಂಡನೆ ಮಾಡಿದರು.

ಅರ್ಜಿ ವಿಚಾರಣೆ ನಡೆಸಿದ ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠ ಶಾಸಕರ ರಾಜೀನಾಮೆಯನ್ನು ಅಂಗೀಕರಿಸದೆ ಹಾಗೂ ಅನರ್ಹಗೊಳಿಸುವ ಯಾವ ಕ್ರಮವನ್ನು ಸ್ಪೀಕರ್ ಕೈಗೊಳ್ಳದೆ ಬುಧವಾರದವರೆಗೂ ಯಥಾಸ್ಥಿತಿಯನ್ನು ಕಾಯ್ದಿರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.