ನವದೆಹಲಿ:(ಫೆ26): ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಗೆ ಭಾರತದ 44 ಯೋಧರು ಹುತಾತ್ಮರಾಗಿದ್ದರು, ಈಗ ಪುಲ್ವಾಮ ದಾಳಿಯ ಪ್ರತಿಕಾರವನ್ನು ಭಾರತ ತೀರಿಸಿಕೊಂಡಿದೆ.

ಎಲ್‍ಓಸಿ(ಪಾಕ್ ಆಕ್ರಮಿತ ಕಾಶ್ಮೀರ)ದಲ್ಲಿ ಬೀಡುಬಿಟ್ಟ ಉಗ್ರರ ಕ್ಯಾಂಪ್‍ಗಳನ್ನು ಭಾರತೀಯ ವಾಯುಸೇನೆ ಧ್ವಂಸಗೊಳಿಸಿದೆ. ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರ ನೆಲೆಯ ಮೇಲೆ ಒಂದು ಸಾವಿರ ಕೆಜಿಯ ಬಾಂಬ್ ಹಾಕಲಾಗಿದೆ. ಈ ದಾಳಿಯಲ್ಲಿ 200-300 ಭಯೋತ್ಪಾದಕರು ಉಡೀಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗಿನ ಜಾವ 3.30 ಕ್ಕೆ ಗಡಿ ನಿಯಂತ್ರಣ ರೇಖೆ ದಾಟಿ ಉಗ್ರರ ನೆಲೆಗಳನ್ನು ಮಟಾಶ್ ಮಾಡಿದ್ದು, 10 ಮಿರಾಜ್ -2000 ಜೆಟ್‍ಗಳಿಂದ ಈ ದಾಳಿಯನ್ನು ನಡೆಸಲಾಗಿದೆ. ಇನ್ನು ಭಾರತೀಯ ಸೇನಾ ನೆಲೆಗಳಲ್ಲಿ ಹೈ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ.