ಮುಂಬೈ(ಜ18): ಚಿತ್ರ ನಿರ್ಮಾಪಕ ರಾಜ್ ಕುಮಾರ್ ಹಿರಾನಿ ವಿರುದ್ಧದ ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಇಮ್ರಾನ್ ಹಶ್ಮಿ ಮಾತನಾಡಿದ್ದು, ಮೀಟೂ ಚಳುವಳಿ ಅದ್ಬುತವಾದ ಆಂದೋಲನವಾಗಿದೆ ಆದರೆ ಸರಿಯಾದ ರೀತಿಯಲ್ಲಿ ತನಿಖೆ ಪ್ರಕ್ರಿಯೆ ನಡೆಯಬೇಕು ಎಂದು ಹೇಳಿದ್ದಾರೆ.

ಇಮ್ರಾನ್ ಅವರು ಮಲ್ಟಿಪ್ಲೆಕ್ಸನಲ್ಲಿ ವೈ ಚೀಟ್ ಇಂಡಿಯಾ ದಲ್ಲಿ ಸಹ ನಟರಾದ ಶ್ರೇಯ ಧನವಾಥರಿಯೊಂದಿಗೆ ಬುಧವಾರ ಪ್ರಚಾರ ಮಾಡುವ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಸಂವಹನ ನಡೆಸಿದ್ದಾರೆ.

ಸಂಜು ಸಿನಿಮಾದಲ್ಲಿ ಕೆಲಸ ಮಾಡಿರುವ ಮಹಿಳೆಯೊಬ್ಬರು ಹಿರಾನಿ ವಿರುದ್ಧ ಲೈಂಗಿಕ ಆರೋಪ ಮಾಡಿದ್ದರು.

ಮಾಧ್ಯಮದವರು ಇದರ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಇಮ್ರಾನ್, ಇದೀಗ ಅವರು ಅಪರಾಧಿಯಾಗಿಲ್ಲ, ನಾನು ಈ ವಿಷಯದ ಬಗ್ಗೆ ಮಾತನಾಡುವುದಿಲ,್ಲ ಆಪಾದನೆಗಳು ನಿಜವಾಗಿದ್ದಲ್ಲಿ ತನಿಖೆಯ ನಂತರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ.

ಇನ್ನು ವೈ ಇಂಡಿಯಾ ಚೀಟ್ ಕುರಿತು ಮಾತನಾಡಿದ ಅವರು, ಇದು ಶಿಕ್ಷಣ ವ್ಯವಸ್ಥೆ ಮತ್ತು ಅದನ್ನು ಹಿಡಿದಿಟ್ಟುಕೊಳ್ಳುವ ಹಾಗೂ ಭ್ರಷ್ಟಾಚಾರದ ಬಗ್ಗೆ ಬಹಳ ಸೂಕ್ತವಾದ ಚಿತ್ರವಾಗಿದ್ದು, ಇದು ನಿಜವಾಗಿಯೂ ವಿಶಿಷ್ಟವಾದ ಉನ್ನತ ಪರಿಕಲ್ಪನೆ ವಿಷಯವಾಗಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.