ಮುಂಬೈ(ಜ.12): ಭಾರತದ ಮಾಜಿ ಕ್ರಿಕೆಟ್ ನಾಯಕ ಮಹಮ್ಮದ್ ಅಜರುದ್ದೀನ್ ಅವರು ತಮ್ಮ ಹಳೆಯ ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಮಿಸ್ ಇಂಡಿಯಾ ಹಾಗೂ ಬಾಲಿವುಡ್ ನಟಿ ಸಂಗೀತ ಬಿಜಲಾನಿ ಮತ್ತು ಅಜರುದ್ದೀನ್ ನವೆಂಬರ್ 14, 1996 ರಂದು ವಿವಾಹವಾದರು. ಆದರೆ ನಂತರ ಅವರಿಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಿ ಇಬ್ಬರು ವಿಚ್ಛೇದನದ ದಾರಿ ಹಿಡಿದರು.

ಅಜರುದ್ದೀನ್ ಸಂಗೀತ ಜೊತೆ ಕಳೆದ ಪ್ರತಿ ಕ್ಷಣವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು 1980 ರ ಮಿಸ್ ಇಂಡಿಯಾ ಸಂಗಿತಾ ಬಿಜಲಾನಿ ಹೇಗೆ ಭೇಟಿ ಮಾಡಿದರು ಮತ್ತು ಹೇಗೆ ಪ್ರೀತಿ ಬೆಳೆಯಿತು ಎಂಬುದರ ಕುರಿತು ಮಾತನಾಡಿದ್ದಾರೆ.

ನಾನು 1985 ರಲ್ಲಿ ಜಾಹಿರಾತಿನ ಚಿತ್ರೀಕರಣದ ಸಮಯದಲ್ಲಿ ಸಂಗೀತ ಬಿಜಲಾನಿ ಅವರನ್ನು ಭೇಟಿಯಾದೆ. ಅವರ ಮೊದಲ ನೋಟದಲ್ಲಿಯೇ ಅವರ ಮೇಲೆ ನನಗೆ ಪ್ರೆಮಾಂಕುರವಾಯಿತು. ಯಾರು ಇದನ್ನು ಬಹಿರಂಗವಾಗಿ ಮಾತನಾಡುತ್ತಾರೆ ಆದರೆ ನಾನು ಹೇಳುತ್ತಿದ್ದೇನೆ. ಬಾಲಿವುಡ್ ಮತ್ತು ಕ್ರಿಕೆಟ್ ದೀರ್ಘಕಾಲದ ಸಂಬಂಧವನ್ನು ಹೊಂದಿದೆ ಎಂದಿದ್ದಾರೆ.

ಒಬ್ಬ ನಟ ಅಥವಾ ಕ್ರಿಕೆಟ್ ಆಟಗಾರರನ್ನು ಮದುವೆಯಾಗುವುದು ವೈಯಕ್ತಿಕ ಆಯ್ಕೆಯಾಗಿರುತ್ತದೆ. ಇಬ್ಬರು ಸೆಲಿಬ್ರಿಟಿಗಳಾಗಿರುವುದರಿಂದ ಎಲ್ಲರ ಗಮನ ನಮ್ಮ ಮೇಲೆ ಇರುತ್ತದೆ ಎಂದು ಹೇಳಿದ್ದಾರೆ.

ಅಜರುದ್ದೀನ್ ಭಾರತವು ಹಿಂದೆಂದೂ ಕಾಣದ ಶ್ರೇಷ್ಟ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು. ಕ್ರಿಕೆಟ್ ವೃತ್ತಿಜೀವನದ ಹೊರತಾಗಿ ಅವರ ವೈಯಕ್ತಿಕ ಜೀವನ ಅಷ್ಟೊಂದು ಸಂತೋಷದಾಯಕವಾಗಿರಲಿಲ್ಲ.