ಮಂಬೈ:(ಫೆ20): ಮಹಾರಾಷ್ಟ್ರದ ರೈತರು ಬೃಹತ್ ಮಟ್ಟದ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಇವರ ಪ್ರತಿಭಟನೆ ಇಂದಿನಿಂದ ಅಂದರೆ ಫೆ20 ರಿಂದ ಆರಂಭವಾದ ಪ್ರತಿಭಟನೆ ಒಂದು ವಾರಗಳ ಕಾಲ ನಡೆಯಲಿದೆ. ಪ್ರತಿಭಟನಾಕಾರರು ಮಹಾರಾಷ್ಟ್ರದ ನಾಸಿಕ್ ನಿಂದ ಹೊರಟವರು ಕೊನೆಗೆ ಮುಂಬೈಗೆ ತಲುಪಲ್ಲಿದ್ದಾರೆ.

ರೈತರ ಸಮಸ್ಯೆಯ ಬಗ್ಗೆ ಸರ್ಕಾರ ಗಮನ ಹರಿಸದೆ ಇರುವುದರಿಂದ ಈ ಪ್ರತಿಭಟನೆಯನ್ನು “ಅಖಿಲ ಭಾರತ ಕಿಸಾನ್ ಸಭಾ” ನೇತೃತ್ವದಲ್ಲಿ ನಡೆಯುತ್ತಿದ್ದು, ಇದುವರೆಗೂ ನಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸದೆ ಇರದ ಕಾರಣ ಪ್ರತಿಭಟನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ರೈತರ ಸಾಲಮನ್ನಾ, ಪಿಂಚಣಿ ವ್ಯವಸ್ಥೆ, ನೀರಾವರಿ ಸೌಲಭ್ಯ, ಕನಿಷ್ಠ ಬೆಂಬಲ ಬೆಲೆ ಇನ್ನು ಇತರ ಬೇಡಿಕೆಗಳೊಂದಿಗೆ ಐವತ್ತು ಸಾವಿರಕ್ಕೂ ಹೆಚ್ಚು ರೈತರು ಈ ಪ್ರತಿಭಟನೆಯಲ್ಲಿ ಭಾಗಿಯಾಗವಹಿಸಲ್ಲಿದ್ದಾರೆ.