ಬೆಂಗಳೂರು(ಜೂನ್.12) ಐಎಂಎ ಜ್ಯೂವೆಲರಿ ಕೋಟ್ಯಾಂತರ ವಂಚನೆಗೆ ಸಂಬಂಧಿಸಿದಂತೆ ಹೂಡಿಕೆದಾರರ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರವು ಮನ್ಸೂರ್ ರ ಆಸ್ತಿಯನ್ನು ಆಡಿಟ್ ಮಾಡಲಾಗಿದೆ.

ಮನ್ಸೂರ್ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಪೊಲೀಸ್ ಅಧಿಕಾರಿಗಳು ಆಡಿಟ್ ಮಾಡಿದ್ದು ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಪೊಲೀಸರು, ಐಎಂಎ ನಿರ್ದೇಶಕರು, ಸಂಸ್ಥೆಯ ಆಡಿಟರ್ಸ್ ವಕೀಲರು ಸೇರಿ ಆಡಿಟ್ ನಡೆಸಿದ್ದಾರೆ. ಐಎಂಎ ಒಟ್ಟು ಸ್ಥಿರಾಸ್ತಿ ಮೌಲ್ಯ 488 ಕೋಟಿ. 1888 ಕೆ.ಜಿ ಚಿನ್ನದ ಆಭರಣ, 18.64 ಕೆ.ಜಿ ಪ್ಲ್ಯಾಟಿನಂ, 463 ಕ.ಜಿ ಬೆಳ್ಳಿ ಆಭರಣ, 30000 ಕ್ಯಾರೆಟ್ ವಜ್ರ, 110 ಕೆ.ಜಿ ಚಿನ್ನ, 350ಕೆ.ಜಿ ಅಡವಿಟ್ಟ ಬಂಗಾರ. 10.66ಕೆ.ಜಿ ಹರಳುಗಳು ಐಎಂಎಗೆ ಸಂಬಂಧಪಟ್ಟ ಆಸ್ತಿಯು ಪತ್ತೆಯಾಗಿದೆ.

ಈ ಮೂಲಕ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಮನ್ಸೂರ್ ಹೊಂದಿದ್ದು ಸರ್ಕಾರಕ್ಕೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಹಾಗೂ ಕಂಪನಿಯ ಹೂಡಿಕೆದಾರರಿಗೂ ಮೋಸ ಮಾಡಿದ್ದಾರೆ.