ಬೆಂಗಳೂರು(ಜೂನ್.11) ಬೆಂಗಳೂರಿನ IMA ಜ್ಯುವೆಲರಿ ಮಾಲಿಕ ಮನ್ಸೂರ್ ಅಲಿಖಾನ್ ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ನಾಪತ್ತೆಯಾಗಿ ಆತ್ಮಹತ್ಯೆಯ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಇದರ ಬೆನ್ನಲಿಯೇ ಈಗ ಮನ್ಸೂರ್ ಮತ್ತೊಂದು ಆಡಿಯೋ ಕಳುಹಿಸಿದ್ದಾರೆ.

ಎಲ್ಲರ ದುಡ್ಡನ್ನೂ ವಾಪಸ್ ಕೊಡುತ್ತೇನೆ. ಮೊದಲು ಸಣ್ಣ ಹೂಡಿಕೆದಾರರಿಗೆ ನಂತರದಲ್ಲಿ ಮಧ್ಯಮ ಹೂಡಿಕೆದಾರರಿಗೆ ಕೊಡುತ್ತೇನೆ. ಅನಂತರ ದೊಡ್ಡ ಹೂಡಿಕೆದಾರರ ಹಣವನ್ನು ವಾಪಸ್ ನೀಡುತ್ತೇನೆ ಎಂದು ಆಡಿಯೋದಲ್ಲಿ ನುಡಿದಿದ್ದಾರೆ.

ತನ್ನ ಎಲ್ಲಾ ಆಸ್ತಿಗಳನ್ನೂ ಮಾರಾಟ ಮಾಡಿ ದುಡ್ಡು ವಾಪಸ್ ಮಾಡುತೇನೆ ಮುಂದಿನ ಶನಿವಾರದ ಒಳಗೆ ನೀಡುತ್ತೇನೆ ಎಂದು ಮನ್ಸೂರ್ ಹೇಳಿದ್ದಾರೆ.

ಮನ್ಸೂರ್ ನಾಪತ್ತೆ ತನಿಖೆಯನ್ನು ಸರ್ಕಾರ CCBಯಿಂದ SITಗೆ ಹಸ್ತಾಂತರಿಸಿದ ಬೆನ್ನಲ್ಲೇ ಮನ್ಸೂರ್ ಈ ಆಡಿಯೋವನ್ನು ಬಿಡುಗಡೆ ಮಾಡಿದ್ದಾನೆ. ಈ ಮುಖಾಂತರ ಮನ್ಸೂರ್ ಯಾವುದೇ ಆತ್ಮಹತ್ಯೆ ಮಾಡಿಕೊಳ್ಳದೆ ಬದುಕಿದ್ದಾನೆ ಎಂದು ಮೋಸಹೋದ ಹೂಡಿಕೆದಾರರು ಸಮಾಧಾನ ಪಡುವಂತಾಗಿದೆ.