ಬೆಂಗಳೂರು(ಏ:04): ಬೆಂಗಳೂರು ದಕ್ಷಿಣ ಕ್ಷೇತ್ರದ ಸಮಸ್ಯೆ ಬಗೆಹರಿದಿದೆ, ಹೈಕಮಾಂಡ್ ನಾಯಕರೇ ತೀರ್ಮಾನಿಸಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದೆ. ಈ ವಿಚಾರವನ್ನು ತೇಜಸ್ವಿನಿ ಅನಂತ್ ಕುಮಾರ್ ಅವರಿಗೂ ಅರ್ಥ ಮಾಡಿಸಿದ್ದೇವೆ, ಇದಕ್ಕೆ ಮೊನ್ನೆ ನಡೆದ ಅಮಿತ್ ಶಾ ರ್ಯಾಲಿಯೇ ಕಾರಣ ಎಂದು ಮುರಳೀಧರ್ ರಾವ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಗೆಲುವು ಸಾಧಿಸುತ್ತದೆ, ಮೈಸೂರು ಹಾಗೂ ಮಂಡ್ಯ ಕ್ಷೇತ್ರಗಳನ್ನು ದೇವೇಗೌಡರ ಕುಟುಂಬಕ್ಕೆ ಬರೆದುಕೊಟ್ಟಿಲ್ಲ, ದೇವೇಗೌಡರು ಅಂದರೆ ಜೆಡಿಎಸ್, ಜೆಡಿಎಸ್ ಎಂದರೆ ದೇವೇಗೌಡರ ಕುಟುಂಬ ಎಂಬಂತಾಗಿದೆ, ಬೇರೆಯವರಿಗೆ ಜೆಡಿಎಸ್ ನಲ್ಲಿ ಅವಕಾಶವೇ ಇಲ್ಲ ಎಂದು ಟೀಕಿಸಿದ್ದಾರೆ.