ಹೆಚ್ಚಿದ ಸೆಲ್ಫಿ ಕ್ರೇಜ್: ವಿಚ್ಚೇದನಕ್ಕೆ ಮುಂದಾದ ಪತಿ

ಭೋಪಾಲ್(ಜ,18) ಇತ್ತೀಚಿನ ದಿಗಳಲ್ಲಿ ಸೆಲ್ಫೀಗೆ ಮಾರುಹೋಗದವರೆ ಇಲ್ಲ, ಹುಟ್ಟಿದ ಮಕ್ಕಳಿನಿಂದ ಹಿಡಿದು ವಯಸ್ಸಾದವರು ಸಹ ಸೆಲ್ಫಿ ತೆಗೆದುಕೊಳ್ಳುವುದನ್ನು ನೋಡಿದ್ದೇವೆ ಆದರೆ ಇಲ್ಲೊಂದು ದಂಪತಿಗೆ ಮಾತ್ರ ಈ ಸೆಲ್ಪಿಯೇ ಮುಳುವಾಗಿದೆ.

ಹೌದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಒಬ್ಬ ವ್ಯಕ್ತಿ ತನ್ನ ಪತ್ನಿ ಹೆಚ್ಚು ಸೇಲ್ಪಿಗೆ ಒಳಗಾಗಿದ್ದಾಳೆ ಎಂದು ವಿಚ್ಚೇದನ ನೀಡಲು ಮುಂದಾಗಿದ್ದಾರೆ.

ಭೋಪಾಲ್‍ನ ಕುಟುಂಬ ನ್ಯಾಯಲಯವು ವಿಚ್ಚೇದನ ಕೋರಿದ ದಂಪತಿಗೆ ಕೌನ್ಸಿಲಿಂಗ್ ನಡೆಸುವಂತೆ ಆದೇಶಿಸಿತ್ತು. ನಂತರ ಅವರ ವಿಚ್ಚೇದನಕ್ಕೆ ಮೂಲ ಕಾರಣ ಸೇಲ್ಪಿ ಎಂದು ತಿಳಿದು ಬಂದಿದೆ.

ಇನ್ನು ಆತ ತನ್ನ ಹೆಂಡತಿ ಹೆಚ್ಚಿನ ಸಮಯವನ್ನು ಮೊಬೈಲ್ ನಲ್ಲಿ ಸೇಲ್ಪಿ ತೆಗೆಯುವುದಕ್ಕೆ ಉಪಯೋಗಿಸುತ್ತಾಳೆ. ಇದರಿಂದ ಕಟುಂಬದ ಸದಸ್ಯರನ್ನು ನಿರ್ಲಕ್ಷಿಸಲಾಗುತ್ತಿದ್ದು. ನಮ್ಮ ಮದ್ಯೆ ಅಸಮಾಧಾನ ಮೂಡಿದೆ ಆದ್ದರಿಂದ ನಾನು ವಿಚ್ಚೇದನಕ್ಕೆ ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.