ನವದೆಹಲಿ(ಜ.29): ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಅವರ ವಿವಾದಾತ್ಮಕ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿದ್ದು, ತೆಹಸೀನ್ ಪೂನಾವಾಲಾ ಎಂಬ ವ್ಯಕ್ತಿ ನಾನು ಹಿಂದು ಹೆಣ್ಣನ್ನು ಮುಟ್ಟಿದ್ದೇನೆ, ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.

ಅನಂತ್ ಅವರ ಹೇಳಿಕೆ ವಿರೋಧಿಸಿ ಟ್ವೀಟ್ ಮಾಡಿರುವ ತೆಹಸೀನ್ ಪೂನಾವಾಲಾ ಎಂಬುವರು ಹಿಂದು ಪತ್ನಿಯ ಜೊತೆ ಇರುವ ಫೋಟೋವೊಂದನ್ನು ಶೇರ್ ಮಾಡಿ, ಅನಂತ್ ಅವರೇ ನಾನು ಹಿಂದು ಹೆಣ್ಣನ್ನು ಮುಟ್ಟಿದ್ದೇನೆ, ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ. ಇದು ನನ್ನ ಚಾಲೆಂಜ್ ಎಂದು ಬರೆದುಕೊಂಡಿದ್ದಾರೆ.

ಅನಂತ್ ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಮೂಲಕ ಅಶಾಂತಿ ಹರಡುವ ಕೆಲಸವನ್ನು ಮಾಡುತಿದ್ದಾರೆ ಎಂದು ಹಲವರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಹಿಂದೂ ಹುಡುಗಿಯ ಕೈ ಮುಟ್ಟಿದರೆ ಆ ಕೈ ಇರಬಾರದು ಎಂದು ಅನತ್ ಕುಮಾರ ಹೆಗಡೆ ಹೇಳಿದ್ದರು.