ಬೆಂಗಳೂರು:(ಫೆ06): ಇತ್ತೀಚೆಗೆ ಸ್ಯಾಂಡಲ್‍ವುಡ್‍ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಳು ಟೈಟಲ್‍ಗಳಲ್ಲಿಯೇ ಹೆಚ್ಚು ಲೈಕ್ ಪಡೆಯುತ್ತಿವೆ. ಜೊತೆಗೆ ಸಿನಿಮಾ ಪ್ರಿಯರನ್ನು ಅಟ್ರ್ಯಾಕ್ಟಿವ್ ಮಾಡುತ್ತಿವೆ. ಈಗ ಸ್ಯಾಂಡಲ್‍ವುಡ್‍ನಲ್ಲಿ “ಮಾಲ್ಗುಡಿ ಡೇಸ್” ಎಂಬ ಟೈಟಲ್‍ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

ಹೌದು ಹಾಗಾದ್ರೆ ಈ ಸಿನಿಮಾದ ಹೀರೋ ಯಾರು ಎಂಬುದರ ಯೋಚನೆ ಬರುವುದು ಸಹಜ ವಿಜಯ್ ರಾಘವೇಂದ್ರ ಅವರು ಮಾಲ್ಗುಡಿ ಡೇಸ್ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರಂತೆ.

ಇನ್ನು “ಮಾಲ್ಗುಡಿ ಡೇಸ್” ಎಂದಾಗ ನೆನಪಿಗೆ ಬರುವುದೇ ಆರ್.ಕೆ ನಾರಾಯಣ್ ಬರೆದ ಈ ಕಥೆ, ಈಗ ಕನ್ನಡದಲ್ಲಿ ಸಿನಿಮಾವಾಗಿ ಬರುತ್ತಿರುವುದು ಸಂತೋಷದ ಸಂಗತಿ,

ಕರಾಟೆ ಕಿಂಗ್ ಎಂದೇ ಹೆಸರಾದ ಶಂಕರ್ ನಾಗ್ ನಿರ್ದೇಶನದ “ಮಾಲ್ಗುಡಿ ಡೇಸ್” ಎಂಬ ಧಾರವಾಹಿಯನ್ನು ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಜನರ ಮುಂದಿಟ್ಟಿದ್ದರು, ಅದು ಮೆಚ್ಚುಗೆಯನ್ನು ಗಳಿಸಿತ್ತು.

ಈಗ ಕಿಶೋರ್ ಮೂಡಬಿದ್ರಿ ಮಾಲ್ಗುಡಿ ಡೇಸ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಸ್ವಯಂಪ್ರಭ ಎಂಟರ್ ಟೇನ್ಮೆಂಟ್ ಪ್ರೊಡಕ್ಷನ್ಸ್ ಲಾಂಛನದಡಿ ಕೆ. ರತ್ನಾಕರ್ ಕಾಮತ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಪೋಸ್ಟರ್ ಬಿಡುಗಡೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಕೋರಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.