ಹೈದರಾಬಾದ್(ಡಿ:೨೯): ಒಂದು ಪ್ರಾಡಕ್ಟ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದ ತೆಲುಗು ನಟ ಮಹೇಶ್ ಬಾಬು ೨೦೦೭-೦೮ ನೇ ಸಾಲಿನ ತೆರಿಗೆಯನ್ನು ಪಾವತಿ ಮಾಡದ ಹಿನ್ನಲೆಯಲ್ಲಿ ಅವರ ಆ್ಯಕ್ಸಿಸ್‌ ಮತ್ತು ಐ ಸಿ ಐ ಸಿ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ.
ಮಹೇಶ್ ಬಾಬು ಒಟ್ಟು ೧೮.೫ ಲಕ್ಷ ರೂ. ತೆರಿಗೆ ಬಾಕಿ ಉಳಿಸಿದ್ದ ಹಿನ್ನಲೆಯಲ್ಲಿ ಜಿ ಎಸ್ ಟಿ ಇಲಾಖೆ ಒಟ್ಟು ೭೩.೫ ಲಕ್ಷ ರೂ. ಇರುವ ಎರಡೂ ಖಾತೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿ ಎಸ್ ಟಿ ಕಮೀಷನರ್ ಆಫೀಸ್ ಅಧಿಕಾರಿಗಳು ತಿಳಿಸಿದ್ದಾರೆ.