ರಾಂಚಿ(ಮಾ:18): 2019ರ ಐಪಿಎಲ್ ದಿನಗಣನೇ ಆರಂಭವಾಗಲಿದ್ದು,ಟೀಮ್ ಇಂಡಿಯಾ ದ ಮಾಜಿ ನಾಯಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಧೋನಿ ತಂಡದೊಂದಿಗೆ ಅಭ್ಯಾಸಕ್ಕೆ ಇಳಿದಿದ್ದಾರೆ. ಐಪಿಎಲ್ ಆರಂಭಕ್ಕೆ 1 ವಾರವಷ್ಟೇ ಬಾಕಿ ಉಳಿದಿದ್ದು,ಮೊದಲ ಪಂದ್ಯದಲ್ಲಿ ಆರ್ ಸಿ ಬಿ ಮತ್ತು ಚೆನ್ನೈ ತಂಡಗಳು ಮುಖಾಮುಖಿಯಾಗಲಿವೆ.

ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟ್ಟರ್ ಖಾತೆಯಲ್ಲಿ ಧೋನಿ ಅಭ್ಯಾಸದಲ್ಲಿ ತೊಡಗಿರುವ ವಿಡಿಯೋವನ್ನು ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಧೋನಿ ಬಿಗ್ ಶಾಟ್ ಸಿಡಿಸಲು ಅಭ್ಯಾಸ ನಡೆಸುತ್ತಿರುವುದು ಕಾಣಬಹುದಾಗಿದೆ.ಅವರೊಂದಿಗೆ ತಂಡದ ಸದಸ್ಯರಾದ ಸುರೇಶ್ ರೈನಾ,ಅಂಬಟಿ ರಾಯುಡು,ಕೇದಾರ್ ಜಾಧವ್,ಮುರಳಿ ವಿಜಯ್ ಸೇರಿದಂತೆ ಹಲವು ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ.

ಮಾರ್ಚ್ 23 ರಂದು ಮೊದಲ ಪಂದ್ಯ ನಡೆಯಲಿದ್ದು,ತವರಿನಲ್ಲಿ ಧೋನಿ ತಂಡ ಆರ್ ಸಿ ಬಿ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.