ಬೆಂಗಳೂರು(ಜುಲೈ.01) ಸಬ್ಸಿಡಿ ರಹಿತ ಅಡುಗೆ ಅನಿಲದ ಸಿಲಿಂಡರ್ ಬೆಲೆ ಅಗಸ್ಟ್ 1ರಿಂದ ಕಡಿಮೆಯಾಗಲಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ (IOC) ಹೇಳಿದೆ.

ಎಲ್ಪಿಜಿ ಗ್ರಾಹಕರಿಗೆ ಇದು ಸಿಹಿಸುದ್ದಿಯಾಗಿದ್ದು, ಇಂದಿನಿಂದ ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆಯಲ್ಲಿ ಇಳಿಕೆಯಾಗಿದೆ. ಸಬ್ಸಿಡಿ ರಹಿತ ಅಡುಗೆ ಅನಿಲ (ಎಲ್ ಪಿಜಿ) ಬೆಲೆಯನ್ನು ಸಿಲಿಂಡರ್ ಗೆ ರೂ. 62.50ಕ್ಕೆ ಕಡಿಮೆಮಾಡಲಾಗಿದೆ. ಹಿಂದಿನ ತಿಂಗಳು 737.50 ಗಳಿಂದ ರೂ. 637ಕ್ಕೆ ಇಳಿಸಲಾಗಿತ್ತು. ಸದ್ಯದ ಅಗಸ್ಟ್ ನಲ್ಲಿ ರೂ. 637 ದಿಂದ ರೂ. 574.50 ರೂಪಾಯಿಗೆ ಇಳಿಸಲಾಗಿದೆ ಎಂದು IOC ಬುಧವಾರ ರಾತ್ರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ನವದೆಹಲಿಯಲ್ಲಿ ಸಬ್ಸಿಡಿಯೇತರ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ದರ ರೂ. 574. 50 ಇದೆ. ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯನ್ನು 2019 ರ ಜುಲೈನಲ್ಲಿ ರೂ. 100.50 ಪ್ರತಿ ಸಿಲಿಂಡರ್‌ಗೆ ಇಳಿಸಲಾಗಿತ್ತು. ಎರಡು ತಿಂಗಳಲ್ಲಿ ಒಟ್ಟು ರೂ. 163.00 ಸಿಲಿಂಡರ್ ಇಳಿಕೆಯಾಗಿದೆ.