ಮುಂಬೈ(ಜ.22): ಭೋಪಾಲ್‍ನ ಸ್ಥಳೀಯ ಕಾಂಗ್ರೆಸ್ ಮುಖಂಡರು ಬಾಲಿವುಡ್ ನಟಿ ಕರಿನಾ ಕಪೂರ್ ಅವರನ್ನು ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಮಾಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಕೋರಿದ್ದಾರೆ.

ಕಾಂಗ್ರೆಸ್ 25 -30 ಕ್ಕೂ ಅಧಿಕ ವರ್ಷಗಳಿಂದ ಭೋಪಾಲ್ ನಲ್ಲಿ ಸ್ಥಾನವನ್ನು ಗೆದ್ದಿಲ್ಲ. ಆದ್ದರಿಂದ ಹೊಸ ಮುಖಗಳನ್ನು ಆರಿಸುವುದರಿಂದ ಇಲ್ಲಿ ಕಾಂಗ್ರಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾದ್ಯವಾಗುತ್ತದೆ ಎಂದು ಯೋಗೇಂದ್ರ ಸಿಂಗ್ ಗುಡ್ಡು ಮತ್ತು ಅನಸ್ ಖಾನ್ ಇಬ್ಬರೂ ನಾಯಕರು ರಾಹುಲ್ ಗೆ ಸೂಚಿಸಿದ್ದಾರೆ ಎಂದು ಟೈಮ್ಸ ಆಫ್ ಇಂಡಿಯಾ ವರದಿ ಮಾಡಿದೆ.

ಕರೀನಾ ಭೋಪಾಲ್‍ನ ಸೊಸೆ ಯಾಗಿದ್ದು. ಕಾಂಗ್ರೆಸ್ ಗಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಯೋಗೇಂದ್ರ ಸಿಂಗ್ ಪತ್ರಿಕೆಗೆ ತಿಳಿಸಿದ್ದಾರೆ.

ಕರೀನಾ ಅವರು ಭೋಪಾಲ್ ನ ಹಿಂದಿನ ರಾಜ ಕುಟುಂಬದ ವಂಶಸ್ಥರಾಗಿದ್ದ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿದ್ದರು. ಸೈಫ್ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ 1991 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕಟ್ ಪಡೆದು ಸ್ಪರ್ಧಿಸಿದ್ದರು.

ಒಟ್ಟಾರೆ ಬಾಲಿವುಡ್ ನಲ್ಲಿ ಝೀರೋ ಫಿಗರ್ ಎಂದು ಫೇಮಸ್ ಆಗಿರುವ ಕರಿನಾ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎಂಬುವುದು ಭಾರೀ ಕೂತುಹಲ ಮೂಡಿಸಿದೆ.