ನವದೆಹಲಿ(ಜೂ,26): ಇಂದು ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಸಂಸತ್ತಿನಲ್ಲಿ ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಮೋದಿ, ಇತ್ತೀಚಿನ ಸಂದರ್ಶನವೊಂದರಲ್ಲಿ ಆರೀಫ್ ಮೊಹಮ್ಮದ್ ಖಾನ್ ಎಂಬುವವರು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮುಸ್ಲಿಂ ಸುಧಾರಣೆ ಮಾಡಿದ್ದರು ತಿಳಿಸಿದ್ದರು ಈ ಹೇಳಿಕೆ ಉಲ್ಲೇಖಿಸಿ ಮಾತನಾಡಿದ ಮೋದಿ ಕಾಂಗ್ರೆಸ್ ಮುಸ್ಲಿಂ ಸುಧಾರಣೆ ಮಾಡುವ ಕೆಲಸ ಮಾಡಿಲ್ಲ, ಅವರು ಮೋರಿಯಲ್ಲಿ ಮಲಗಲು ಬಯಸಿದರೆ, ಮಲಗಲಿ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ವಿರುದ್ಧ ಹರಿಹಾಯ್ದಿದ್ದರು ಮೋದಿ, ಜಾಮೀನಿನ ಮೇಲೆ ಇವರು ಹೊರಗೆ ಖುಷಿಯಿಂದ ಇದ್ದಾರೆ. ಸರ್ಕಾರ ತನ್ನ ಜವಾಬ್ದಾರಿ, ಕರ್ತವ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ನಾವು ನೆಲದ ಕಾನೂನನ್ನು ಗೌರವಿಸುತ್ತೇವೆ. ಮತ್ತು ನಮ್ಮ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ರಂಜನ್ ಚೌಧುರಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

2 ಜಿ ಹಗರಣ ಮತ್ತು ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಯಾರನ್ನಾದರೂ ಹಿಡಿಯಲು ನಿಮಗೆ ಸಾಧ್ಯವಾಯಿತೆ? ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಕಂಬಿಯ ಹಿಂದೆ ಕಳುಹಿಸಲು ಸಾಧ್ಯವಾಯಿತೆ? ನೀವು ಅವರನ್ನು ಕಳ್ಳರು ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಿರಾ, ಹಾಗಾದರೆ ಅವರು ಏಕೆ ಇಲ್ಲಿ ಕುಳಿತಿದ್ದಾರೆ, ಜೈಲಿನಲ್ಲಿ ಏಕೆ ಇಲ್ಲ ಎಂದು ರಂಜನ್ ಚೌಧುರಿ ಅವರು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.