ಚಿಕ್ಕಬಳ್ಳಾಪುರ(ಜೂ:01): ಲೋಕಸಭೆ ಚುನಾವಣೆಯಿಂದ ಕಾಂಗ್ರೆಸ್ -ಜೆಡಿಎಸ್ ಪಾಠ ಕಲಿಯಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಕೇಳಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿ ಯೂ ಅಲ್ಲ .ಮಾಜಿ ಸಿಎಂ ಸಿದ್ದರಾಮಯ್ಯ ಬ್ಲಾಕ್ ಮೇಲ್ ರಾಜಕಾರಣಿ ಅಲ್ಲ. ಅವರಿಗೆ ಅನ್ನಿಸಿದ್ದನ್ನು ನೇರವಾಗಿ ಮಾತನಾಡುತ್ತಾರೆ.ಸಮ್ಮಿಶ್ರ ಸಕಾರ ಉಳಿಬಾರದು ಅಂದುಕೊಂಡ್ರೆ ಉಳಿಯುವುದಿಲ್ಲ . ಸರ್ಕಾರ ಉಳಿಬೇಕು ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಬೇಕೆಂದು ಪಣತೊಟ್ಟಿದ್ದಾರೆ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಬಿಜೆಪಿಯ ಶಾಸಕರ ಜೊತೆ ಏನು ಮಾಡುತ್ತಾರೆ ಎಂದು ನಾನು ಅರಿತುಕೊಂಡಿದ್ದೇನೆ. ಈ ಸಮ್ಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು ಎಂಬುದು ಪ್ರತಿಪಕ್ಷದ ನಾಯಕರ ಉದ್ದೇಶವಾಗಿದೆ ಎಂದು ತಿಳಿಸಿದರು.

ಯಾವುದೇ ಒಂದು ವಿಷಯದ ಬಗ್ಗೆ ಅರಿತುಕೊಳ್ಳದೆ ಮಾತನಾಡುವುದು ಸರಿ ಅಲ್ಲ ಮತ್ತು ಮಾಹಿತಿಯ ಕೊರತೆಯಿಂದ ಬಿಎಸ್‍ವೈ ಇಲ್ಲದ ಸಲ್ಲದ ಆರೋಪ ಮಡಬಾರದು ಎಂದು ಕಿಡಿಕಾರಿದ್ದಾರೆ .